ಸಿದ್ದಾಪುರ : ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಸಾಗಣೆ ವಿರೋದಿ ದಿನಾಚರಣೆ.

ಸಿದ್ದಾಪುರ : ಅಂತಾರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಸಾಗಣೆ ವಿರೋದಿ ದಿನ ಕಾರ್ಯಕ್ರಮವು ಸ್ಥಳೀಯ ಪೊಲೀಸ್ ಠಾಣೆಯ ವತಿಯಿಂದ ಕವಚೂರ್ ಹಾಗೂ ನಾಣಿಕಟ್ಟಾ ಗಳಲ್ಲಿ ನಡೆಯಿತು
ಕವಂಚೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು
ಪಿಎಸ್ಐ ಮಹಾಂತಪ್ಪ ಕುಂಬಾರ ಮತ್ತು ನಾಣಿಕಟ್ಟಾ ಪಿ ಯು ಕಾಲೇಜಿನಲ್ಲಿ ಪಿ ಎಸ್ ಐ ಮಲ್ಲಿಕಾರ್ಜುನ್ ಕೊರಾಣಿ ರವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಮಾದಕ ವಸ್ತುಗಳ ಸೇವನೆಯಿಂದ ಅರೋಗ್ಯದ ಜೊತೆಗೆ ಸಮಾಜದ ಸ್ವಾಸ್ತ್ಯ ಕೂಡ ಹಾಳಾಗುತ್ತಿದೆ ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು
ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಿಸಲಾಗುವದು ಎಂದು ತಿಳಿಸಿದ ಅವರು ಮಕ್ಕಳಿಗೆ ಸಾಮಾಜಿಕ ಜಾಲತಾಣದಿಂದ ಆಗುವಂತಹ ಅನುಕೂಲತೆ ಹಾಗೂ ಅನಾನುಕೂಲತೆಯ ಬಗ್ಗೆಯೂ ತಿಳಿಸಿದರು.
ಸೈಬರ್ ಕ್ರೈಂ ಬಗ್ಗೆ ಆಗುವಂತಹ ಪ್ರಕರಣಗಳ ಬಗ್ಗೆ ಮತ್ತು ವಿದ್ಯಾರ್ಥಿ ಜೀವನದಲ್ಲಿ ಆಗುವಂತಹ ಮೋಸಗಳು ಬಗ್ಗೆ ಮಾಹಿತಿ ನೀಡಿದರು