ಅಪಾಯದ ಮುನ್ಸೂಚನೆ ನೀಡುತ್ತಿದೆ ಶಿಥಿಲಾವಸ್ಥೆಗೆ ತಲುಪಿದ ಗ್ರಾಮ ಲೆಕ್ಕಾಧಿಕಾರಿ ಕಚೇರಿ

ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂದಾನೆಲಿರುವ ಕಿಬ್ಳೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಶಿಥಿಲಾವಸ್ಥೆಗೆ ತಲುಪಿದ್ದು , ಜನತೆಗೆ ತೊಂದರೆಗಳಾಗುವ ಮೊದಲು ಸುರಕ್ಷತಾ ಕ್ರಮ ಕೈಗೊಳ್ಳಲು ಕ್ಯಾದಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ ಟಿ ನಾಯ್ಕ್ ಹೆಗ್ಗೇರಿ ಆಗ್ರಹ ಮಾಡಿದ್ದಾರೆ .

ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಮುಚ್ಚಿ ನಾಲ್ಕೈದು ವರ್ಷ ಆಗಿದೆ ಇದನ್ನ ಬಂದ್ ಮಾಡಿರುವುದರಿಂದ ಇಲ್ಲಿನ ಸಾರ್ವಜನಿಕರು ಅಧಿಕಾರಿಗಳನ್ನ ಕಾಣಬೇಕು ಅಂದರೆ ವಿನಾ ಕಾರಣ ಕ್ಯಾದಗಿ ಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.

ಶಿಥಿಲಗೊಂಡು ಇಷ್ಟು ವರ್ಷ ಆದ್ರೂ ಬೇರೆ ಕಟ್ಟಡ ವ್ಯವಸ್ಥೆ ಮಾಡಿಲ್ಲ , ಪಕ್ಕದಲ್ಲೇ ಇರುವ ಅರೋಗ್ಯ ಮತ್ತು ಕ್ಷೇಮ ಕೇಂದ್ರ , ರೇಷನ್ ಅಂಗಡಿ ಗೆ ಬರುವ ಜನರು ಮಳೆ ಬಂದಾಗ ಈ ಕಟ್ಟಡದ ಹೊರ ಭಾಗದಲ್ಲಿ ಆಶ್ರಯ ಪಡೆಯುತ್ತಾರೆ ವಾಹನವನ್ನು ಸಹ ನಿಲ್ಲಿಸುತ್ತಾರೆ ಅಂತಹ ಸಂದರ್ಭದಲ್ಲಿ ಹಂಚುಗಳು ಪಕಾಸು ರಿಪು ಬಿದ್ದು ಅಪಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಅಪಾಯದ ಅಂಚಿನಲ್ಲಿರುವ ಕಟ್ಟಡ ವನ್ನು ತೆರವುಗೊಳಿಸಿ ಆಗುವ ಅಪಾಯವನ್ನು ತಡೆಯಬೇಕಿದೆ

ಕಟ್ಟಡ ದಲ್ಲಿರುವ ಹೆಂಚು , ನಾಟ, ಇಳಿಸಿ ಹರಾಜು ಕರೆದು ಮಾರಾಟ ಮಾಡಿದರೆ ಪಂಚಾಯತ್ ಗೆ ಆದಾಯ ಬರುತ್ತದೆ. ಈ ಹಣವನ್ನು ಕುಡಿಯುವ ನೀರಿನ ಪೂರೈಕೆ ಗೆ ಬಳಸಿದರೆ ಜನತೆಗೆ ಅನುಕೂಲ ವಾಗುತ್ತದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈ ಗೊಳ್ಳಬೇಕು, ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ದಿವಾಕರ್‌ ನಾಯ್ಕ, ನುಡಿ ಸಿರಿ ನ್ಯೂಸ್‌, ಸಿದ್ದಾಪುರ