ಮಹಿಳೆಯೊಬ್ಬಳು ಕಾಣೆಯಾಗಿ 3 ವರ್ಷಗಳ ಬಳಿಕ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಆಕೆಯ ಅಸ್ಥಿಪಂಜರ ಪತ್ತೆಯಾಗಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆಸಿದೆ. ಸಿಐಡಿ ಸೆಪ್ಟಿಕ್ ಟ್ಯಾಂಕ್ನಿಂದ ಆಕೆಯ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದೆ. ಈ ಬೆಳವಣಿಗೆಯ ನಂತರ ಮೃತ ಮಹಿಳೆಯ ಪತಿಯನ್ನು ಬಂಧಿಸಿ ಆಕೆಯ ಕೊಲೆ ಆರೋಪ ಹೊರಿಸಲಾಗಿದೆ. ತುಂಪಾ ಮಂಡಲ್ ಎಂಬ ಮಹಿಳೆ ಮಾರ್ಚ್ 2020 ರಲ್ಲಿ ನಾಪತ್ತೆಯಾಗಿದ್ದರು, ನಂತರ ಆಕೆಯ ತಂದೆ ಲಕ್ಷ್ಮಣ್ ಹಲ್ದರ್ ಅವರು ಪೊಲೀಸರಿಗೆ ಕಾಣೆಯಾದ ದೂರು ದಾಖಲಿಸಿದ್ದರು.
ಏಪ್ರಿಲ್ 2020 ರಲ್ಲಿ, ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮಹಿಳೆಯ ಪತಿ ಬೊಂಬಲ್ ಮಂಡಲ್ ಅವರನ್ನು ಬಂಧಿಸಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ಪೊಲೀಸರಿಗೆ ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಮಹಿಳೆಯ ತಂದೆ ನಂತರ ಪ್ರಕರಣದ ಉನ್ನತ ತನಿಖಾ ಸಂಸ್ಥೆಗಾಗಿ ಕೋಲ್ಕತ್ತಾ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಅವರ ಮನವಿಗೆ ಪ್ರತಿಕ್ರಿಯೆಯಾಗಿ ಕೋಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಪಶ್ಚಿಮ ಬಂಗಾಳ ಸಿಐಡಿಗೆ ಹಸ್ತಾಂತರಿಸಿತ್ತು. ಜೂನ್ 13 ರಂದು, ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡರು.
ತನಿಖಾ ಸಂಸ್ಥೆಯು ಮಹಿಳೆಯ ಪತಿಯನ್ನು ಮತ್ತೆ ಪ್ರಶ್ನಿಸಿದ್ದು, 10 ದಿನಗಳಲ್ಲಿ ಪತಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಕೆಯ ಶವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶೇಖರಿಸಿಟ್ಟಿರುವುದಾಗಿಯೂ ಆತ ಹೇಳಿದ್ದಾನೆ, ಬೊಂಬಾಲ್ ಮಂಡಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
2020ರಲ್ಲಿ ಬೆಂಗಾಲ್‌ನ ಮಿಲನ್‌ಪಲ್ಲಿಯಲ್ಲಿ ದಂಪತಿ ಬಾಡಿಗೆ ಮನೆಯಲ್ಲಿದ್ದಾಗ ಪತ್ನಿಯನ್ನು ಕೊಂದು ಶವವನ್ನು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಗಳು ಬಹಿರಂಗಪಡಿಸಿದ ಸ್ಥಳದಲ್ಲಿ ಸಿಐಡಿ ಸೆಪ್ಟಿಕ್ ಟ್ಯಾಂಕ್ ಅನ್ನು ಪರಿಶೀಲಿಸಿದಾಗ, ಮಹಿಳೆಯ ಅಸ್ಥಿಪಂಜರ ಮತ್ತು ಆಭರಣಗಳು ಪತ್ತೆಯಾಗಿವೆ.
ಸಿಐಡಿ ಮೂಲಗಳ ಪ್ರಕಾರ ಆರೋಪಿಯು ತುಂಪಾಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂಬ ಶಂಕೆಯಿಂದ ಆರೋಪಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.