ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಿಗದೆ ಚಿಕಿತ್ಸೆಗೆ ರೋಗಿಗಳ ಪರದಾಟ.

ಸಿದ್ದಾಪುರ : ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಬಂದ ರೋಗಿಗಳಿಗೆ ಅರ್ಧ ದಿನ ಕಾದರು ವೈದ್ಯರು ಸಿಗದೆ ರೋಗಿಗಳು ಚಿಕಿತ್ಸೆ ಗೆ ಪರದಾಡುವoತಾಗಿದೆ ಎಂದು ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಗುರುವಾರ ಆರೋಪ ಮಾಡಿದ್ದಾರೆ
ತಾಲೂಕಿನ ಗಡಿಭಾಗಗಳಿಂದ ಬೆಳಿಗ್ಗೆ 11 ಗಂಟೆಗೆ ಇಲ್ಲಿಗೆ ಬಂದಿದ್ದೇವೆ ವೈದ್ಯರು 12.30 ಕ್ಕೆ ಊಟಕ್ಕೆ ಹೋದವರು 3 ಗಂಟೆವರೆಗೂ ಬಾರದೆ ನಾವು ಊಟ ತಿಂಡಿ ಬಿಟ್ಟು ಕಾಯುವಂತಾಗಿದೆ. ನಮಗೆ ಅನಾರೋಗ್ಯ ದ ನಡುವೆಯೂ ಸಹ ಸರದಿ ಸಾಲ್ಲಿನಲ್ಲಿ ನಿಂತು ಕಾಯುವಂತ ಅನಿವಾರ್ಯತೆ ಉಂಟಾಗಿದೆ ಇಲ್ಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಬಡವರಾಗಿರುವ ನಾವು ಖಾಸಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಸರಕಾರಿ ಆಸ್ಪತ್ರೆಗೆ ಬರುತ್ತೇವೆ ಇಲ್ಲಿ ಈ ರೀತಿಯಾದರೆ ನಮ್ಮ ಪರಿಸ್ಥಿತಿ ಏನಾಗಬೇಕು ಎಂದು ಅಧಿಕಾರಿಗಳು ಯೋಚಿಸಬೇಕು ಕೂಡಲೇ ಈ ರೀತಿಯ ವ್ಯವಸ್ಥೆಯನ್ನು ಜನಪ್ರತಿನಿದಿನಗಳು ಸರಿಪಡಿಸಿ ಯಾವುದೇ ತೊಂದರೆಗಳು ಆಗದಂತೆ ಚಿಕಿತ್ಸೆ ಸಿಗುವಂತ ವ್ಯವಸ್ಥೆಗಳಾಗಬೇಕು ಎಂದು ಒತ್ತಾಯ ಮಾಡಿದರು

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ
ಮಲ್ಲಿಕ್ ಗೌಡ ಕುಣಜಿ, ಹರೀಶ್ ನಾಯ್ಕ್ , ಲೋಕೇಶ್ ನಾಯ್ಕ್ ಹೇಮಂತ್ ನಾಯ್ಕ್ ಚೆನ್ಮಾವ್
ಮಂಜು ಕಣಸೆ ಮುಂತಾದವರು ಬಂದು ವೈದ್ಯರುಗಳನ್ನ ಭೇಟಿ ಮಾಡಿ ರೋಗಿಗಳ ಸಮಸ್ಯೆಗಳನ್ನ ವೈದ್ಯರಿಗೆ ತಿಳಿಸಿ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು
” ಆಸ್ಪತ್ರೆಗೆ ಬಂದ ರೋಗಿಗಳು ದಿನ ನಿತ್ಯ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಹಲವಾರು ಕರೆಗಳು ಬರುತ್ತವೆ ಇಂದು ಇಲ್ಲಿ ಬಂದು ನೋಡಿದಾಗ ವೈದ್ಯರು ಸಿಗದೇ ಜನರು ತಮ್ಮ ಸಮಸ್ಯೆ ಹೇಳಿಕೊಂಡರು ವೈದ್ಯರುಗಳು ಸಹ ಇರಲಿಲ್ಲ ನಾವು ಇಲ್ಲಿ ವಿಚಾರಿಸಿದ ನಂತರದಲ್ಲಿ ವೈದ್ಯರು ಬಂದರು ಆ ರೀತಿ ಆಗಬಾರದು ಸರಿಯಾದ ಚಿಕಿತ್ಸೆ ರೋಗಿಗಳಿಗೆ ಸಿಗಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು”
ಪಾಂಡುರಂಗ ನಾಯ್ಕ್ ಚೆನ್ಮಾವ್ ಸಾಮಾಜಿಕ ಹೋರಾಟಗಾರರು.