ಹಿಮಾಚಲ ಪ್ರದೇಶದ ಹಿಮಾ ಪರ್ವತವನ್ನೇರಿದ ಜೋಯಿಡಾ ತಾಲ್ಲೂಕಿನ ಛಾಪಖಂಡ ದ್ರುವ ಭಟ್ಟ

ಜೋಯಿಡಾ: ತಾಲೂಕಿನ ಛಾಪಖಂಡ ನಿವಾಸಿ ದ್ರುವ ನರಸಿಂಹ ಭಟ್ಟ ತಮ್ಮ ಚಿಕ್ಕ ವಯಸ್ಸಿನಲ್ಲೇ ಹಿಮಪರ್ವತ ಏರುವುದರ ಮೂಲಕ ಮಹತ್ವದ ಸಾಧನೆ ಮಾಡಿದ್ದಾನೆ.

ಭಾರತದಲ್ಲಿ ಅತಿ ಕಠಿಣ ಹಿಮ ಚಾರಣಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಪಿನ್ ಪಾರ್ವತಿ ಟ್ರಕ್ ಅನ್ನು ದ್ರುವ ಭಟ್ಟ ಪೂರೈಸಿದ್ದಾನೆ.

ಗೋಕರ್ಣ ಹೈಕರ್ಸ ನ ನಾಲ್ಕು ಜನರ ತಂಡದ ಜೊತೆ 9 ದಿನಗಳಲ್ಲಿ 130 ಕಿಮೀ ಅತಿ ದುರ್ಗಮ ಹಿಮದಲ್ಲಿ ಚಾರಣ ನಡೆಸಿದನ್ನು ಹಿಮಾಚಲ ಪತ್ರಿಕೆಗಳು ಸುದ್ದಿ ಪ್ರಕಟಿಸಿ ಪ್ರಶಂಸಿವೆ.

ಸಮುದ್ರ ಮಟ್ಟದಿಂದ 17,451 ಅಡಿ ಎತ್ತರಕ್ಕೆ ತಲುಪಿ ಭಾರತದ ಧ್ವಜವನ್ನು ಹಾರಿಸಿದ 2023ರ ಮೊದಲ ತಂಡ ಇದಾಗಿದೆ. ಕ್ಷಣ ಕ್ಷಣಕ್ಕೂ ಹಿಮಪಾತವನ್ನು ಎದುರಿಸುತ್ತ ಜೀವದ ಹಂಗಿಲ್ಲದೆ ಐದು ದಿನಗಳ ಕಾಲ ಸಂಪೂರ್ಣ ಹಿಮದ ರಾಶಿಯಲ್ಲಿ ನಡೆದು ಗುರಿ ತಲುಪಲಾಗಿದೆ.

ದಾಂಡೇಲಿಯ ಬಂಗೂರನಗರ ಪದವಿ ಮಹಾ ವಿದ್ಯಾಲಯದ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿಧ್ಯಾರ್ಥಿಯಾದ ದ್ರುವ ಭಟ್ಟ ಜೋಯಿಡಾ ತಾಲ್ಲೂಕಿನ ಕಾಡುಮನೆ ಹೋಮ ಸ್ಟೇ ಮಾಲಕರಾದ ನರಸಿಂಹ ಭಟ್ಟ ಮತ್ತು ಕಾವ್ಯ ಭಟ್ಟ ದಂಪತಿಗಳ ಮಗನಾಗಿದ್ದಾನೆ.

ಕಳೆದ ವರ್ಷ ನೇಪಾಳದ ಅನ್ನಪೂರ್ಣ ವರ್ತುಲ ಚಾರಣವನ್ನು ದ್ರುವ ಭಟ್ಟ ಯಶಸ್ವಿಯಾಗಿ ಪೂರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.