ಇಂಟರ್‌ನೆಟ್ ಅಪೋಕ್ಯಾಲಿಪ್ಸ್ ತಡೆಯುವುದಕ್ಕಾಗಿ ನಾಸಾ ಮಿಷನ್

ಸಂಭಾವ್ಯ ಇಂಟರ್‌ನೆಟ್ ಸ್ಥಗಿತವಾಗುವ ಸಂದರ್ಭವನ್ನು ತಡೆಯುವ ಯತ್ನದಲ್ಲಿ ನಾಸಾ ಒಂದು ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ‘ಇಂಟರ್‌ನೆಟ್ ಅಪೋಕ್ಯಾಲಿಪ್ಸ್ ಉಂಟಾದರೆ ತಿಂಗಳುಗಟ್ಟಲೆ ಇಂಟರ್ ನೆಟ್ ಸ್ಥಗಿತವಾಗುವ ಸಾಧ್ಯತೆ ಇದೆ. ಮಿರರ್ ಪ್ರಕಾರ, ಯುಎಸ್ ಬಾಹ್ಯಾಕಾಶ ಸಂಸ್ಥೆಯ ಪಾರ್ಕರ್ ಸೋಲಾರ್ ಪ್ರೋಬ್ ಸೌರ ಮಾರುತದ ಮೂಲಕ ನ್ಯಾವಿಗೇಟ್ ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಮುಂಬರುವ ಸೌರ ಚಂಡಮಾರುತದ ಸಂಭಾವ್ಯ ಪ್ರಭಾವದ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ದು, ಇದನ್ನು ಸಾಮಾನ್ಯವಾಗಿ ಇಂಟರ್ನೆಟ್ ಅಪೋಕ್ಯಾಲಿಪ್ಸ್ ಎಂದು ಕರೆಯಲಾಗುತ್ತದೆ, ಇದು ಮುಂದಿನ ದಶಕದಲ್ಲಿ ಎದುರಾಗುವ ಸಾಧ್ಯತೆ ಇದೆ.

2018 ರಲ್ಲಿ ಉಡಾವಣೆಯಾದ ಬಾಹ್ಯಾಕಾಶ ನೌಕೆಯು ಗಮನಾರ್ಹವಾದ ಪ್ರಯಾಣ ಮಾಡಿದ್ದು, ಅದು ಸೌರ ಮಾರುತವನ್ನು ಉತ್ಪಾದಿಸುವ ಸೂರ್ಯನ ಮೇಲ್ಮೈಗೆ ಹತ್ತಿರ ತಂದಿತು. ಸೌರ ಮಾರುತವು ವರದಿಯ ಪ್ರಕಾರ ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಹೊರಗಿನ ವಾತಾವರಣದಿಂದ ಹೊರಹೊಮ್ಮುವ ಚಾರ್ಜ್ಡ್ ಕಣಗಳ ನಿರಂತರ ಸ್ಟ್ರೀಮ್ ಅನ್ನು ಒಳಗೊಂಡಿದೆ.  ತೀವ್ರವಾದ ಶಾಖ ಮತ್ತು ವಿಕಿರಣದ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲು ಶ್ರಮಿಸಿತ್ತು.

ಅಧ್ಯಯನದ ಪ್ರಮುಖ ಲೇಖಕರಾಗಿ ಕಾರ್ಯನಿರ್ವಹಿಸಿದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟುವರ್ಟ್ ಬೇಲ್ ಸೌರ ಮಾರುತವನ್ನು ಅರ್ಥಮಾಡಿಕೊಳ್ಳುವ ಮಹತ್ವವನ್ನು ವಿವರಿಸಿದ್ದು, ಗಾಳಿಯು ಸೂರ್ಯನಿಂದ ಭೂಮಿಗೆ ಸಾಕಷ್ಟು ಮಾಹಿತಿಯನ್ನು ಸಾಗಿಸುತ್ತದೆ. ಆದ್ದರಿಂದ ಭೂಮಿಯ ಮೇಲಿನ ಪ್ರಾಯೋಗಿಕ ಕಾರಣಗಳಿಗಾಗಿ ಸೂರ್ಯನ ಗಾಳಿಯ ಹಿಂದಿನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದಿದ್ದಾರೆ.

ಸೂರ್ಯನು ಹೇಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಭೂಕಾಂತೀಯ ಬಿರುಗಾಳಿಗಳನ್ನು ಹೇಗೆ ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯದ ಮೇಲೆ ಅದು ಪರಿಣಾಮ ಬೀರಲಿದೆ ಇದು ನಮ್ಮ ಸಂವಹನ ಜಾಲಗಳಿಗೆ ಬೆದರಿಕೆಯಾಗಿದೆ ಎಂದಿದ್ದಾರೆ ಅವರು.ಅಂತಹ ಘಟನೆ ಸಂಭವಿಸಿದರೆ ಜನರು ತಿಂಗಳುಗಳು ಅಥವಾ ವರ್ಷಗಳವರೆಗೆ ಇಂಟರ್ನೆಟ್ ಪಡೆಯದೇ ಇರಬಹುದು. ಇದು ಉಪಗ್ರಹಗಳು ಮತ್ತು ವಿದ್ಯುತ್ ಮಾರ್ಗಗಳನ್ನು ನಿಷ್ಪ್ರಯೋಜಕಗೊಳಿಸಬಹುದು.

NASA ಸಾರ್ವಜನಿಕರಿಗೆ ತಮ್ಮ ಹೆಸರನ್ನು ಮೈಕ್ರೋಚಿಪ್‌ನಲ್ಲಿ ಕೊರೆಯುವ ಅವಕಾಶವನ್ನು ನೀಡುವ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಮುಂದಿನ ವರ್ಷ ನಾಸಾದ ಯುರೋಪಾ ಕ್ಲಿಪ್ಪರ್ ಬಾಹ್ಯಾಕಾಶ ನೌಕೆಯ ಜತೆ ಹೋಗಲಿದೆ.ಯುರೋಪಾ ಕ್ಲಿಪ್ಪರ್ ಬಾಹ್ಯಾಕಾಶ ನೌಕೆಯು ಅಕ್ಟೋಬರ್ 2024 ರಲ್ಲಿ ಗುರು ಮತ್ತು ಅದರ ಚಂದ್ರ ಯುರೋಪಾಗೆ ಪ್ರಯಾಣಿಸಲು ನಿಗದಿಪಡಿಸಲಾಗಿದೆ.