ಹುಡುಗಿಯರು ಹುಚ್ಚಾಪಟ್ಟೆ ಬಡಿದಾಡಿಕೊಂಡಿದ್ದಾರೆ ರೊಚ್ಚಿಗೆದ್ದ ಒಬ್ಬೇ ಒಬ್ಬ ಯುವತಿಯಂತೂ – ಬರೋಬ್ಬರಿ 20 ಮಂದಿಗೆ ಬಾರಿಸಿಬಿಸಾಕಿದ್ದಾಳೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ, ಭಾರೀ ಸದ್ದು ಮಾಡುತ್ತಿದೆ.
ಮೊದಮೊದಲು ಹುಡುಗಿಯರ ಗುಂಪೊಂದು ಒಬ್ಬೇ ಒಬ್ಬ ಹುಡುಗಿಯ ಜೊತೆ ಜಗಳವಾಡುತ್ತದೆ. ಆದರೆ ಆ ಹುಡುಗಿ ಮಾತ್ರ ರೊಚ್ಚಿಗೆದ್ದು ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದಾಳೆ.
ಗುಲಾಬಿ ಬಣ್ಣದ ಹೂಡಿ (ಪುಲ್ ಓವರ್) ಧರಿಸಿರುವ ಹುಡುಗಿಯೊಬ್ಬಳು ಅಷ್ಟೊಂದು ಯುವತಿಯರನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಬಗೆಯನ್ನು ನೋಡಿ, ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಜಗಳವಾಡಿದ ಯುವತಿಯನ್ನು ನೆಟಿಜನ್‌ಗಳು ಆಕೆಯನ್ನು ವಂಡರ್ ವುಮನ್‌ಗೆ ಹೋಲಿಸುತ್ತಿದ್ದಾರೆ. ಅಂತಹ ಧೈರ್ಯ ಪ್ರತಿಯೊಬ್ಬ ಮಹಿಳೆಗೂ ಇರಬೇಕು ಎಂದು ಹೇಳಿದ್ದಾರೆ.
ಜೂನ್ 12 ರಂದು ಅಪ್‌ಲೋಡ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ 4,00,000 ಕ್ಕೂ ಹೆಚ್ಚು ವೀಕ್ಷಣೆಗಳು, ಲಕ್ಷಾಂತರ ಕಾಮೆಂಟ್‌ಗಳೂ ಬರುತ್ತಿವೆ.