ಮರಳುಗಾಡಿನಲ್ಲಿ ಕಳೆದು ಹೋದ ನಾಯಿ ಮತ್ತೆ ಮರಳಿದಾಗ

ಅನೇಕರಿಗೆ ಸಾಕುಪ್ರಾಣಿಗಳೆಂದರೆ ಮನುಷ್ಯರಿಗಿಂತ ಹೆಚ್ಚು. ಒಂದರ್ಥದಲ್ಲಿ ಕುಟುಂಬ ಸದಸ್ಯರಂತೆಯೇ. ತಾವು ಎಲ್ಲಿಯೇ ಹೋದರೂ ಅವುಗಳನ್ನು ಕರೆದುಕೊಂಡು ಹೋಗುತ್ತಾರೆ. ಅವುಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಅರೆಗಳಿಗೆಯೂ ಅವುಗಳನ್ನು ಬಿಟ್ಟಿರಲಾರರು. ಹೀಗಿರುವಾಗ ಸಾಕಿದ ಪ್ರಾಣಿಯೊಂದು ಕಳೆದು ಹೋದರೆ ಹೇಗಾಗಬೇಡ? ಈ ದಂಪತಿಗೆ ಕಳೆದುಹೋದ ತಮ್ಮ ನಾಯಿ ಮತ್ತೆ ಸಿಕ್ಕಿದೆ. ಭಾವೋದ್ವೇಗದಿಂದ ಅದನ್ನು ಅಪ್ಪಿ ಮುದ್ದಾಡಿದ್ದಾರೆ.

ಮರಭೂಮಿಯಲ್ಲಿ ಪ್ರಯಾಣಿಸುತ್ತಿದ್ಧಾದ ಈ ನಾಯಿ ಇವರಿಂದ ತಪ್ಪಿಸಿಕೊಂಡಿದೆ. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ನಾಲ್ಕು ದಿನಗಳ ಕಾಲ ದುಃಖದಲ್ಲಿಯೇ ಈ ದಂಪತಿ ದಿನ ಕಳೆದಿದ್ದಾರೆ. ಅಂತೂ ನಾಯಿಗೆ ಅವರು, ಅವರಿಗೆ ನಾಯಿ ಸಿಕ್ಕ ಸಂತೋಷ ಮತ್ತು ಸಮಾಧಾನದ ಗಳಿಗೆಗಳು ಸೃಷ್ಟಿಯಾಗಿವೆ.