ದಾಂಡೇಲಿಯಲ್ಲಿ ಬಸ್ಸಿಗಾಗಿ ನೂಕುನುಗ್ಗಲು


ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರಸ್ ಸರ್ಕಾರ ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ ದಾಂಡೇಲಿ ಬಸ್ ನಿಲ್ದಾಣದಲ್ಲಿ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಕರು ಕಂಡು ಬರುತ್ತಿದ್ದಾರೆ. ತಮಗೆ ಇಷ್ಟದ ಊರುಗಳಿಗೆ ಹೋಗಲು ಉತ್ಸಾಹದಿಂದ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ…

ಮಂಗಳವಾರವೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸಿದ್ದು ಕಂಡು ಬಂದಿತ್ತು. ಸಾರಿಗೆ ಬಸ್ ಇದೀಗ ಮಹಿಳೆಯರಿಂದಲೆ ತುಂಬಿ ತುಳುಕುತ್ತಿದ್ದು, ಪುರುಷರು ಹರಸಾಹಸ ಪಟ್ಟು ಬಸ್ಸನ್ನೇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಂತೂ ಬಸ್ಸಿನಲ್ಲಿ ಪ್ರಯಾಣಿಸಲು ತೀವ್ರ ಸಂಕಷ್ಟ ಎದುರಾಗಿದೆ.

ಒಂದು ಕಡೆ ನೋಟ್ ಬುಕ್ ಹಾಗೂ ಪಠ್ಯ ಪುಸ್ತಕಗಳನ್ನೊಳಗೊಂಡ ಶಾಲಾ ಬ್ಯಾಗನ್ನು ಬೆನ್ನಿಗೆ ಹಾಕ್ಕೊಂಡು ಬಸ್ ಹತ್ತಲು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಮಹಿಳೆಯರು ಸೀಟಿಗಾಗಿ ಕಿಟಕಿಯನ್ನೇರಿ ಬಸ್ಸಿನೊಳಗೆ ಹೋಗಿ ಸೀಟ್ ಕಾಯ್ದಿರಿಸುವ ದೃಶ್ಯ ಇದೀಗ ದಾಂಡೇಲಿ ಬಸ್ ನಿಲ್ದಾಣದಲ್ಲಿ ಮಾಮೂಲಿ ಎಂಬಂತಾಗಿದೆ.

ಸಂದೇಶ ಜೈನ್, ನುಡಿಸಿರಿ ನ್ಯೂಸ್‌ ದಾಂಡೇಲಿ..