ಕಾರವಾರ: ರಕ್ಷಣಾ ಇಲಾಖೆಯ ಸಂಶೋಧನೆ ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ನೌಕಾಪಡೆ ತಂಡವು ಇತ್ತೀಚೆಗೆ ಸಂಶೋಧಿಸಿ, ಅಭಿವೃದ್ಧಿ ಪಡಿಸಿದ ತಪಸ್ ಎಂಬ ಸಣ್ಣ ವಿಮಾನ ಮಾದರಿಯ ಡ್ರೋಣ್ ಪರೀಕ್ಷೆಯನ್ನು ಯಶಸ್ವಿಗೊಳಿಸಿದೆ.
ಚಿತ್ರದುರ್ಗದಲ್ಲಿರುವ ತನ್ನ ಬೇಸ್ ನಿಂದ ಮಾನವ ರಹಿತ ವಿಮಾನ ಮಾದರಿ ಡ್ರೋಣ್ 285 ಕಿಲೋಮೀಟರ್ ದೂರವನ್ನು 3.30 ಗಂಟೆಯ ಹಾರಾಟ ಅವಧಿ ಪೂರೈಸಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಇರುವ ಸುಭದ್ರ ನೌಕೆಯಲ್ಲಿ ಲ್ಯಾಂಡಿಂಗ್ ಆಗಿದೆ. ಈ ಅವಧಿಯಲ್ಲಿ 20,000 ಅಡಿ ಎತ್ತರದಲ್ಲಿ ಕಾರವಾರದಲ್ಲಿ ಇದ್ದ ಸುಭದ್ರ ನೌಕೆಯ ಸೂಚನೆಯನ್ನು ಪಾಲಿಸುವಲ್ಲಿ ಯಶಸ್ವಿಯಾಗಿದೆ.
ದೇಶಿ ನಿರ್ಮಿತ ಮಾನವ ರಹಿತ ವಿಮಾನ ಮಾದರಿಯ ಡ್ರೋಣ್ ಇದಾಗಿದ್ದು, 2013 ರಲ್ಲಿ ಇದರ ಪ್ರಯೋಗ ಆರಂಭಿಸಲಾಯಿತು. ಬೆಂಗಳೂರಿನ HAL ನಲ್ಲಿ ಇದರ ನಿರ್ಮಾಣ ಕಾರ್ಯ ಮಾಡಲಾಗಿದ್ದು ಸ್ವದೇಶಿ ತಂತ್ರಜ್ಞಾನ ಬಳಸಲಾಗಿದೆ. 2020 ರಲ್ಲಿ ಮೊದಲ ಬಾರಿ ಚಿತ್ರದುರ್ಗದಲ್ಲಿ 16,000 ಅಡಿ ಎತ್ತರವನ್ನು ಎಂಟು ಗಂಟೆಗಳ ಕಾಲ ಹಾರಾಟ ನಡೆಸಿ ಯಶಸ್ವಿಯಾಗಿತ್ತು. ನಂತರ ಇದೇ ಮೊದಲ ಬಾರಿ ಕಾರವಾರದ ಅರಬ್ಬೀ ಸಮುದ್ರದವರೆಗೆ 20,000 ಅಡಿ ಎತ್ತರದಲ್ಲಿ ತಡೆರಹಿತವಾಗಿ ಹಾರಾಟ ನಡೆಸಿ ಯಶಸ್ವಿಯಾಗಿದೆ. ಇದರ ಹಾರಾಟ ಸಾಮರ್ಥ್ಯ 24 -35 ಗಂಟೆ ಎಂದು ಡಿಆರ್ ಡಿಓ ಹೇಳಿಕೊಂಡಿದೆ.
ಇದು 350 ಕೆ.ಜಿ ಸಾಮರ್ಥ್ಯ ಹೊಂದಿದ್ದು 1800 ಕೆ.ಜಿ ತೂಕವಿದ್ದು 31.2 ಅಡಿ ಉದ್ದವಿದೆ. ರೆಕ್ಕೆಗಳು 67 ಅಡಿ ಏಳು ಇಂಚು ಇದೆ. ವೇಗ: 224 km/h (139 mph, 121 kn)ಇದ್ದು 1,000 ಕಿಮೀ (620 ಮೈಲಿ, 540 ಎನ್‍ಮಿ)ನಷ್ಟು ದೂರ ಕ್ರಮಿಸುತ್ತದೆ. ಈ ಡ್ರೋಣ್ 30 ಸಾವಿರ ಅಡಿಯವರೆಗೂ ಹಾರಬಲ್ಲ ಸಾಮರ್ಥ್ಯ ಹೊಂದಿದೆ. ಇದು ಮೋಡವಿದ್ದರೂ ಯಾವುದೇ ಸಮಸ್ಯೆ ಇಲ್ಲದೇ ಭೂಮಿಯ ಚಿತ್ರಣವನ್ನು ತೆಗೆಯುವ ಸಾಮರ್ಥ್ಯ ಹೊಂದಿದ್ದು ಬೇಹುಗಾರಿಕೆ, ಹವಾಮಾನ ಸೂಚನೆ, ದಾಳಿಗೆ ಬಳಕೆಯಾಗುತ್ತದೆ.
ಐಎನ್ ಎಸ್ ಸುಭದ್ರ ನೌಕೆ ಬಳಿ ತಪಸ್ ಯುಎವಿ ಕಾರ್ಯಾಚರಣೆಯನ್ನು ನಡೆಸಲು ಹಾಗೂ ಕಂಟ್ರೋಲ್ ಮಾಡಲು ಒಂದು ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಉಅS) ಮತ್ತು ಎರಡು ಶಿಪ್ ಡೇಟಾ ಟರ್ಮಿನಲ್ (Sಆಖಿ) ಅನ್ನು ಸ್ಥಾಪಿಸಲಾಗಿದೆ. ಪರೀಕ್ಷೆ ನಂತರ, ತಪಸ್ ಮತ್ತೆ ಎಟಿಆರ್ ಗೆ ಬಂದಿಳಿದಿದ್ದು ಮುಂದೆ ಯುದ್ದ ಸಂದರ್ಭದಲ್ಲಿ ಶತ್ರುಗಳನ್ನು ಮಣಿಸಲು ಹಾಗೂ ಬೇಹುಗಾರಿಕೆ ನಡೆಸಲು ವಾಯುಸೇನೆ,ಭೂ ಸೇನೆ ಹಾಗೂ ನೌಕಾ ಸೇನೆಗೆ ನೆರವಾಗಲಿದೆ.