ಹಳಿಯಾಳ :ವೇಸ್ಟ್ ವುಡ್ ಕ್ರಾಪ್ಟ್ ಮೇಕಿಂಗ್ ತರಬೇತಿಯ ಸಮಾರೋಪ ಸಮಾರಂಭ :ಕೌಶಲ್ಯ ಮತ್ತು ಶ್ರಮದಿಂದ ಜೀವನ ಉನ್ನತಿಯೆಡೆಗೆ ಸಾಗಲು ಸಾಧ್ಯ : ಪ್ರಸಾದ್ ದೇಶಪಾಂಡೆ

ಹಳಿಯಾಳ : ಇಂದು ಕಾಲ ಬದಲಾಗಿದೆ. ಹೊಸ ಹೊಸ ಅವಿಷ್ಕಾರಗಳತ್ತ ಚಿಂತನೆಯನ್ನು ಮಾಡಬೇಕಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲೆ ಸಿಗುವ ವಸ್ತುಗಳನ್ನೆ ಬಳಸಿಕೊಂಡು ತಮ್ಮದೇ ಆದ ದೃಷ್ಟಿಕೋನದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕಾಗಿದೆ. ಇಂಥಹ ಪ್ರಯೋಗಗಳಲ್ಲಿ ವೇಸ್ಟ್ ವುಡ್ ಕ್ರಾಪ್ಟ್ ಇಂದು ಹೆಚ್ಚು ಹೆಚ್ಚು ಆಕರ್ಷಣೆಗೆ ಪಾತ್ರವಾಗಿರುವುದರ ಜೊತೆಗೆ ಕಸದಿಂದ ರಸ ಸಾಧ್ಯ ಎಂಬುವುದನ್ನು ತೋರಿಸಿಕೊಟ್ಟಿದೆ ಎಂದು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಇದರ ಧರ್ಮದರ್ಶಿ ಪ್ರಸಾದ್ ದೇಶಪಾಂಡೆಯವರು ನುಡಿದರು.

ಅವರು ಇಂದು ಹಳಿಯಾಳ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಸಭಾಭವನದಲ್ಲಿ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗದ ಆಶ್ರಯದಡಿ ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದ ವೇಸ್ಟ್ ವುಡ್ ಕ್ರಾಪ್ಟ್ ಮೇಕಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಕೆವಿಐಸಿಯ ನಿರ್ದೇಶಕರಾದ ನೂನೆ ಶ್ರೀನಿವಾಸ್ ರಾವ್, ಸಹಾಯಕ ನಿರ್ದೇಶಕರಾದ ಜಿ.ರಾಜಣ್ಣ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಯತೀಂದ್ರ ಕುಮಾರ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಭಾಗವಹಿಸಿದ್ದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿಯವರು ಸ್ವಾಗತಿಸಿದರು. ಸಂಸ್ಥೆಯ ಯೋಜನಾಧಿಕಾರಿ ಸಂತೋಷ್ ಫರೀಟ್ ವಂದಿಸಿದರು. ಉಳವಯ್ಯ ಬೆಂಡಿಗೇರಿಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.