ಕೆಲವೊಂದು ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ,ಟ್ರೆಂಡ್ ಸೃಷ್ಟಿಸುತ್ತವೆ. ಕೆಲವರು ಮದುವೆ ಮೆರವಣಿಗೆಯ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಇನ್ನು ಕೆಲವರು ಮದುವೆಯ ಸಂದರ್ಭಗಳಲ್ಲಿ ವೇದಿಕೆಯಲ್ಲಿ ನಡೆಯುವ ಮೋಜಿನ ದೃಶ್ಯಗಳನ್ನು ಪೋಸ್ಟ್ ಮಾಡುತ್ತಾರೆ. ವಧು-ವರರ ತಮಾಷೆಯ ದೃಶ್ಯಗಳು ಮತ್ತು ಇಬ್ಬರ ನಡುವಿನ ಪ್ರಣಯ ದೃಶ್ಯಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ವಧು-ವರರ ನಡುವಿನ ಜಗಳವೂ ವೈರಲ್ ಆಗುತ್ತವೆ ಎಂಬುದು ಗಮನಾರ್ಹ. ಏನೇ ಆಗಲಿ ಜನರು ಮದುವೆ ಮನೆಯ ಯಾವುದೇ ವೀಡಿಯೊವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದೀಗ ಅಂತಹ ವಿಡಿಯೋವೊಂದು ವೈರಲ್ ಆಗಿದೆ.
ಹಿಂದೂ ಸಂಪ್ರದಾಯದಲ್ಲಿ, ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಆಚರಣೆಯು ಸಂಗಾತಿಯ ಸ್ವೀಕಾರದ ಭರವಸೆಯನ್ನು ಸಂಕೇತಿಸುತ್ತದೆ. ಇದು ತಮ್ಮ ಜೀವನದುದ್ದಕ್ಕೂ ಪರಸ್ಪರ ಗೌರವಿಸುವ ಅವರ ಪ್ರತಿಜ್ಞೆಯನ್ನು ಸಂಕೇತಿಸುತ್ತದೆ. ಈ ಸಮಾರಂಭದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಧು-ವರರು ವೇದಿಕೆಯ ಮೇಲೆ ನಿಂತು ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಾರೆ. ವಧು ಮತ್ತು ವರರು ಪರಸ್ಪರ ಮುಖಾಮುಖಿಯಾಗಿ ನಿಂತಿದ್ದಾರೆ ಮತ್ತು ಸಮಾರಂಭವು ಪ್ರಾರಂಭವಾಗುವವರೆಗೆ ಕಾಯುತ್ತಾರೆ. ಆದರೆ, ಅಷ್ಟರಲ್ಲಿ ವರನ ಮುಖಕ್ಕೆ ಏನೋ ಬಡಿಯುತ್ತದೆ. ಅದಕ್ಕೆ ಆತ ತತ್ತರಿಸುತ್ತಾನೆ.
ವರ ಮಹಾಶಯನ ಕಣ್ಣಿಗೆ ಪೆಟ್ಟು ಬಿದ್ದು ನೋವಿನಿಂದ ನರಳುತ್ತಾನೆ. ಆ ವೇಳೆ ವಧು ಯಾರಿಗೂ ಕಾಯದೆ, ಯಾವುದೇ ಮುಜುಗರಕ್ಕೂ ಒಳಗಾಗದೆ ತಕ್ಷಣವೇ ಅವನಿಗೆ ಸಹಾಯ ಮಾಡುತ್ತಾರೆ. ವರನ ಕಣ್ಣಿಗೆ ಏನೋ ಬಿದ್ದಿದ್ದನ್ನು ನೋಡಿದಳು. ಅವನ ಕಣ್ಣಿಗೆ ತೆಳ್ಳಗಿನ ಹುಳು ಬಿದ್ದಿದೆ ಎಂದು ಅರಿತ ಅವಳು ಆತನ ಮುಖವನ್ನು ಎರಡೂ ಕೈಗಳಿಂದ ಹಿಡಿದು ಅವನ ಕಣ್ಣುಗಳಿಗೆ ತನ್ನ ಬಾಯಿಂದ ಗಾಳಿ ಬೀಸಿದಳು. ಅತ್ತ ವರ ಒದ್ಲಾಡುತ್ತಿರುವಾಗ ಇತ್ತ ವಧುವಿನ ಈ ವರ್ತನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಎಲ್ಲರೂ ಅವಳನ್ನು ಹೊಗಳಿದ್ದಾರೆ. ಹುಡುಗ ಸಹ ಸಾವರಿಸಿಕೊಂಡು ಪತ್ನಿ ತನಗೆ ಸೇವೆ ಮಾಡಿದ್ದನ್ನು ಕಂಡು ಸಂತಸಗೊಂಡಿದ್ದಾನೆ.