‘ಗಂಧದ ಗುಡಿ’ಗೆ ಅಭಿಮಾನಿಗಳು ಫಿದಾ.! ಥಿಯೇಟರ್ ಗಳು ಹೌಸ್ ಫುಲ್.! ಪ್ರೀತಿಯ ಅಪ್ಪು ನೆನೆದು ಕಣ್ಣೀರು

ಬೆಂಗಳೂರು: ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕನಸಿನ ಸಿನಿಮಾ‌ ‘ಗಂಧದ ಗುಡಿ’ ಇಂದು‌ ಕರ್ನಾಟಕವಲ್ಲದೇ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ರಾಜ್ಯದಲ್ಲಿ 223 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಳಗ್ಗೆಯಿಂದಲೇ ಗಂಧದಗುಡಿಗೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ. ಬಹುತೇಕ ಮಾರ್ನಿಂಗ್ ಶೋಗಳು ಭರ್ತಿಯಾಗಿದ್ದು, ಬೆಂಗಳೂರಿನಲ್ಲೇ ಪ್ರಿಮಿಯರ್ ಶೋಗಳು ದಾಖಲೆ ಬರೆದಿದೆ.

ಬೆಂಗಳೂರಿನ 29 ಶೋಗಳು ಹೌಸ್​ ಫುಲ್ ಕಲೆಕ್ಷನ್ ಆಗಿದೆ. ಇನ್ನು ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ‌. ಅಭಿಮಾನಿಗಳ ಜೊತೆ ದೊಡ್ಮನೆ ಕುಟುಂಬ ನೋಡುವುದಕ್ಕೆ ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದು, ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳ ಜೊತೆ‌ ಡ್ಯಾನ್ಸ್ ಮಾಡಿದ್ದಾರೆ.

ಇನ್ನು ಗಂಧದಗುಡಿ ಸಿನಿಮಾ ನೋಡಿದ ಅಭಿಮಾನಿಗಳು ಕಣ್ಣೀರಿಟ್ಟದ್ದಾರೆ. ಪುನೀತ್ ಮೇಕಪ್ ಇಲ್ಲದೆ ಅಭಿನಯಿಸಿರುವ ‘ಗಂಧದ ಗುಡಿ’ ಸಿನಿಮಾ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ.