ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್.! ಪ್ರಾರಂಭಗೊಳ್ಳಲಿದೆ ಬಿಬಿಕೆ ಟಿವಿ ಆವೃತ್ತಿ.!

ವೂಟ್‌ನಲ್ಲಿ ಪ್ರಸ್ತುತ ಬಿಗ್ ಬಾಸ್ ಕನ್ನಡ ಓಟಿಟಿ ಶೋ ಪ್ರಸಾರವಾಗುತ್ತಿದೆ. ಇದು ಮುಗಿಯುತ್ತಿದ್ದಂತೆ ಟಿವಿ ಸೀಸನ್ ಆರಂಭಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಯಾವಾಗ ಎಂದು ಯಾರಿಗೂ ಉತ್ತರ ಸಿಕ್ಕಿರಲಿಲ್ಲ. ಈಗ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 9 ರ ಟಿವಿ ಶೋ ಆರಂಭದ ದಿನಾಂಕವನ್ನು ತಿಳಿಸಿದೆ.

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಮುಗಿಯುವ ಹಂತಕ್ಕೆ ಬಂದಿದೆ. ಬಿಗ್ ಬಾಸ್ ಪ್ರಿಯರು ಟಿವಿ ಸೀಸನ್ ಯಾವಾಗ ಶುರುವಾಗಲಿದೆ ಎನ್ನುವುದರ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಅದಕ್ಕೆಲ್ಲ ಉತ್ತರವಾಗಿ ಕಲರ್ಸ್ ಕನ್ನಡ ವಾಹಿನಿಯು ಹೊಸದೊಂದು ಪ್ರೋಮೋ ರಿಲೀಸ್ ಮಾಡಿದೆ.

ಸೆಪ್ಟೆಂಬರ್ 24 ರಂದು ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿ ಶೋ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಶೋ ನಿತ್ಯ 9.30 ಕ್ಕೆ ಪ್ರಸಾರವಾಗಲಿದೆ. ಈ ಶೋನಲ್ಲಿ ಪ್ರವೀಣರ ಜೊತೆ ನವೀನರು ಇರಲಿದ್ದಾರಂತೆ. ಬಿಗ್ ಬಾಸ್ ಕನ್ನಡ ಓಟಿಟಿ ಶೋ ಸ್ಪರ್ಧಿಗಳ ಜೊತೆ ಹೊಸಬರು ಎಂಟ್ರಿಯೂ ಆಗಲಿದೆಯಂತೆ.

ಹಿಂದಿಯ ಶೋ ಹಾಗೇ ಹಳೆ ಸ್ಪರ್ಧಿಗಳಿಗೂ ಈ ಸೀಸನ್‌ನಲ್ಲಿ ಮತ್ತೆ ಅವಕಾಶ ಸಿಗಲೂಬಹುದು. ಅಂದಹಾಗೆ ಇದು ಬಿಗ್ಗೆಸ್ಟ್ ಸೀಸನ್ ಅಂತೆ. ಹೊಸ ಪ್ರೋಮೋದಲ್ಲಿ ಈ ಹಿಂದಿನ ಸೀಸನ್‌ ಸ್ಪರ್ಧಿಗಳಾದ ಅನುಪಮಾ ಗೌಡ, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್ ಕೂಡ ಕಾಣಿಸಿಕೊಂಡಿದ್ದು, ಕನ್ನಡದ ಬಿಗ್ ಬಾಸ್ 9 ಬರುತ್ತಿದೆ ಎಂದು ಹೇಳಿದ್ದಾರೆ. ಟಿಆರ್‌ಪಿ ಹೆಚ್ಚಿದ ಕಾರಣಕ್ಕೆ ಬಿಗ್ ಬಾಸ್ 13 ಶೋವನ್ನು 140 ದಿನಗಳ ಕಾಲ ಪ್ರಸಾರ ಮಾಡಲಾಗಿತ್ತು. ಅದರಂತೆ ಈ ಶೋವನ್ನು ಕೂಡ ನೂರು ದಿನಗಳಿಗೂ ಅಧಿಕ ಕಾಲ ಪ್ರಸಾರ ಮಾಡಬಹುದು ಎನ್ನಲಾಗಿದೆ.

ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿ ಯಾರ‍್ಯಾರು ಭಾಗವಹಿಸಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ನಟ ಅನಿರುದ್ಧ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿವಿಧ ರಂಗದ ವಿಭಿನ್ನ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆಯೇ ಎಂದು ಎಂದು ಕಾದು ನೋಡಬೇಕಿದೆ.