ಅದ್ಧೂರಿಯಾಗಿ ಲಾಂಚ್ ಆದ ಪುನೀತ್​ ರಾಜಕುಮಾರ್ ಕನಸಿನ ಕೂಸು ‘ಗಂಧದಗುಡಿ’ ಟ್ರೇಲರ್.! ಪ್ರಧಾನಿ ಮೋದಿ ಪ್ರಶಂಸೆ.!

ಪವರ್ ಸ್ಟಾರ್ ಪುನೀತ್​ ರಾಜಕುಮಾರ್ ಕನಸಿನ ಕೂಸು ‘ಗಂಧದಗುಡಿ’ ಟ್ರೇಲರ್ ಅದ್ಧೂರಿಯಾಗಿ ಲಾಂಚ್ ಆಗಿದೆ. ತಮ್ಮ ನೆಚ್ಚಿನ ನಟನನ್ನು ಬಿಗ್​ ಸ್ಕ್ರೀನ್​​ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಸಂತಸ ಮುಗಿಲಿ ಮುಟ್ಟಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಗಂಧದ ಗುಡಿ ಸಿನೆಮಾದ ಟ್ರೇಲರ್ ನೋಡಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅಪ್ಪು ಪತ್ನಿ ಅಶ್ವಿನಿ ಟ್ವೀಟ್​​ಗೆ ರಿಪ್ಲೇ ಮಾಡಿ, ಅಪ್ಪು ಲಕ್ಷಾಂತರ ಜನರ ಮನಸ್ಸಿನಲ್ಲಿ ಬದುಕಿದ್ದಾರೆ. ಪುನೀತ್ ರಾಜ್​ಕುಮಾರ್​ ಒಬ್ಬ ತೇಜಸ್ಸಿನ ವ್ಯಕ್ತಿಯಾಗಿದ್ದರು. ಪುನೀತ್​ ರಾಜ್​ಕುಮಾರ್​ ಒಬ್ಬ ಅಪ್ರತಿಮ ಪ್ರತಿಭಾವಂತರು. ಗಂಧದಗುಡಿ ಸಾಕ್ಷ್ಯಚಿತ್ರ ಪ್ರಕೃತಿ ಮಾತೆಗೆ, ಪರಿಸರ ಸಂರಕ್ಷಣೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೇಳಿಗ್ಗೆ 10 ಗಂಟೆಗೆ PRK Audio ಯೂಟ್ಯೂಬ್ ಚಾನೆಲ್​ನಲ್ಲಿ ಗಂಧದಗುಡಿ ಟ್ರೈಲರ್​ ಲಾಂಚ್ ಮಾಡಲಾಗಿದೆ. ಪವರ್​ಸ್ಟಾರ್ ನಟನೆಯ ಕೊನೆಯ ಈ ಚಿತ್ರ ಅ. 28 ಕ್ಕೆ ತೆರೆಯ ಮೇಲೆ ಬರಲಿದ್ದು, ಅಭಿಮಾನಿಗಳು ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರವನ್ನು ವೈಲ್ಡ್​ಫೋಟೋಗ್ರಾಫರ್ ಅಮೋಘವರ್ಷ ನಿರ್ದೇಶನ ಮಾಡಿದ್ದು, ಅರಣ್ಯ ಜಗತ್ತನ್ನು ರಾಜಕುಮಾರನೊಂದಿಗೆ ಪರಿಚಯಿಸೋ ಪ್ರಯತ್ನವನ್ನು ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅಗಲಿ ಅ. 29 ಕ್ಕೆ ಒಂದು ವರ್ಷ ಆಗಲಿದ್ದು, ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಗಂಧದ ಗುಡಿ ರಿಲೀಸ್ ಆಗಲಿದೆ. ಇನ್ನು ಗಂಧದ ಗುಡಿ ಸಿನಿಮಾ ರಿಲೀಸ್ ಹಿನ್ನೆಲೆ ಬಹುದೊಡ್ಡ ಉತ್ಸವ ಮಾಡಬೇಕು ಅನ್ನೋ ಕಾರಣಕ್ಕೆ ಅಪ್ಪು ಅಭಿಮಾನಿಗಳು ಈಗಿಂದಲೇ ತಯಾರಿ ನಡೆಸುತ್ತಿದ್ದಾರೆ.