ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಜಪ್ತಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಭಟ್ಕಳ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಶಿರಾಲಿಯ ಚೆಕ್‌ಪೊಸ್ಟ ಬಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕೋಡಿಯ ಗೋಕುಲನಗರದ ವದ್ರಾಳ ನಿವಾಸಿ ಯಲ್ಲಪ್ಪ ಲಕ್ಷ್ಮಣ ಸನದಿ, ನಾಗಾರಜ ನಿಂಗಪ್ಪ ಕಾಂಬಳೆ ಬಂಧಿತ ಆರೋಪಿಗಳು. ಇವರು ಭಟ್ಕಳದ ಇಮಾಮ್ ರವೂಪ್ ಗವಾಯಿ, ಕೆಪ್ಪಾ ಮಜೀಬ್, ಮುದಸ್ಸಿರ್ ಮೊಕಿ ಇವರ ಸಹಾಯ ಪಡೆದು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು. ಇವರು ಹೊನ್ನಾವರದ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ, ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಎತ್ತು, ಹೋರಿ ಸೇರಿದಂತೆ ಒಟ್ಟು ೭ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ವಾಹನ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳದ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಮೀಣ ಠಾಣೆಯಲ್ಲಿ ಪಿ.ಎಸ್.ಐ ಶ್ರೀಧರ್ ನಾಯ್ಕ ದೂರು ನೀಡಿದ್ದು, ಪಿ.ಎಸ್.ಐ ಮಯೂರ ಪಟ್ಟಣ ಶೆಟ್ಟಿ,
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಾರ್ಯಚರಣೆ ಯಲ್ಲಿ ಪೋಲಿಸ್ ಸಿಬ್ಬಂದಿಯಾದ ವೀರಣ್ಣ,ಅಕ್ಷತಾ,ವಿನಾಯಕ
ವಿನಯ,ಸದಾಶಿವ,ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು . ನಂತರ ಗೋವನ್ನು ಮುರ್ಡೇಶ್ವರ ಗೋಶಾಲೆಗೆ ನೀಡಿದ್ದಾರೆ.