ಹೆತ್ತವರ ಮುಂದೆಯೇ ಚಾಕುವಿನಿಂದ ಇರಿದು  ಕೊಂದ ಯುವತಿ ಮನೆಯವರು, ಅಣ್ಣನ‌ ಪ್ರೇಮ್ ಕಹಾನಿಗೆ ತಮ್ಮ ಬಲಿ

ಕಲಬುರಗಿ, ಸೆ.22: ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ಸುಮಿತ್‌ ಮಲ್ಲಾಬಾದ್ ಎಂಬ 19 ವರ್ಷದ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದ ಸುಮಿತ್‌, ಮುಂಬೈನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ. ಇನ್ನೂ ಇದೇ ಊರಲ್ಲಿ ಸುಮಿತ್ ಸಹೋದರ ಸಚಿನ್ ಕೂಡ ವಾಸವಾಗಿದ್ದ. ಸಚಿನ್ ನಾಗನಹಳ್ಳಿ ಗ್ರಾಮದ ತನ್ನದೆ ಏರಿಯಾದ ಯುವತಿಗೆ ಪ್ರೀತಿಸುತ್ತಿದ್ದನಂತೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಭಾರಿ ನ್ಯಾಯ ಪಂಚಾಯಿತಿ ಮಾಡಿದ್ದರಂತೆ‌. ಆದ್ರೆ, ಅದು ಬಗೆಹರೆದಿಲ್ಲ. ನಿನ್ನೆ ಸಂಜೆ ಸಚಿನ್ ಮನೆಗೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಎಂಟ್ರಿ ಕೊಟ್ಟಿದ್ದಾರೆ. ಆಗ ಸಚಿನ್ ಮನೆಯಲ್ಲಿರದ ಕಾರಣ ಆತನ ತಾಯಿ ಮತ್ತು ಸಹೋದರನ ಜೊತೆ ಗಲಾಟೆ ತೆಗೆದಿದ್ದಾರೆ. ಬಳಿಕ ಗಲಾಟೆ ವಿಕೋಪಕ್ಕೆ ತೆರಳಿ ಸುಮಿತ್​​ನನ್ನ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.

ಇತ್ತ ಕಣ್ಣೆದುರೆ ಹೆತ್ತ ಮಗನಿಗೆ ಚಾಕುವಿನಿಂದ ಇರಿದಿರೋದನ್ನ ಕಂಡ ತಾಯಿ, ಮಗನನ್ನ ಉಳಿಸಿಕೊಳ್ಳಲು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಹನ್ನೆರೆಡು ಗಂಟೆಗಳ ಕಾಲ ನಡೆದ ಚಿಕಿತ್ಸೆ ಕೊನೆಗೂ ಫಲಕಾರಿಯಾಗಿದೆ ಬೆಳಗ್ಗೆ ಸುಮಿತ್ ಸಾವನ್ನಪ್ಪಿದ್ದಾನೆ. ಇನ್ನು ಮಗ ಸಚಿನ್​ ಆ ಹುಡುಗಿಯ ಜೊತೆ ಸ್ನೇಹ ಬೆಳೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾತುಕತೆ ಮೂಲಕ‌ ರಾಜಿ ಪಂಚಾಯ್ತಿ ಮಾಡಿ, ನನ್ನ ಮಗ ಅವನ‌ ಪಾಡಿಗೆ ಅವನು ಕೆಲಸ ಮಾಡಿಕೊಂಡಿದ್ದ. ಆದ್ರೆ, ಅದೇ ವಿಚಾರಕ್ಕೆ ಇದೀಗ ಗಲಾಟೆ ತೆಗೆದು ನನ್ನ‌ ಇನ್ನೊಬ್ಬ ಮಗ ಏನು ತಪ್ಪು ಮಾಡದೆ ಇದ್ದರೂ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಆ ಹೆತ್ತ ಜೀವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಜೀವದ ಬದುಕಿಗೆ ಎರಡು ಜೀವ ಹೋಗುವುದು ಗ್ಯಾರೆಂಟಿ ಎಂದು ಆಕ್ರೋಶದ ಕಟ್ಟೆ‌ ಒಡೆದಿದೆ. ಇನ್ನು ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಖುದ್ದು ಕಲಬುರಗಿ ಪೊಲೀಸ್ ಕಮಿಷನರ್ ಡಾ ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ವ್ಯೆಯಕ್ತಿಕ ವಿಚಾರಕ್ಕೆ ಕೊಲೆ‌ ನಡೆದಿದೆ. ಕೊಲೆಯಾದ ಯುವಕನ ಸಹೋದರ ಮತ್ತು ಯುವತಿಯ ನಡುವಿನ ವಿಚಾರ ಕೂಲೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳ ಬಂಧನದ ಬಳಿಕ ಕೊಲೆಯ ಹಿಂದಿನ ಅಸಲಿ ಕಾರಣ ಬಯಲಾಗಲಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇನೆ ಆಗಲಿ ಯುವತಿಯ ವಿಚಾರದಲ್ಲಿ ಏನು ಮಾಡದ ಅಮಾಯಕ ಯುವಕ ಬಲಿಯಾಗಿರೋದು ನಿಜಕ್ಕೂ ದುರಂತವೆ ಸರಿ.