ಗಂಗಾವಳಿ ನದಿ ಆಳದಲ್ಲಿ ಆಕ್ಟಿವಾ ಸ್ಕೂಟಿ ಪತ್ತೆ

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಿಂದ 500 ಮೀ ದೂರದ ಗಂಗಾವಳಿ ನದಿ ಆಳದಲ್ಲಿ ಆಕ್ಟಿವಾ ಸ್ಕೂಟಿ ಪತ್ತೆಯಾಗಿದೆ.

ಭಾನುವಾರ ಬೆಳಗ್ಗೆ, ಈಶ್ವರ ಮಲ್ಪೆ ಸೇತುವೆ ಬಳಿ ಕಾರ್ಯಾಚರಣೆಗೆ ತೆರಳಿದಾಗ ಕಾರ್ಯಾಚರಣೆಯ ಟೆಂಡರ್ ಪಡೆದವರು ವಿರೋಧ ವ್ಯಕ್ತಪಡಿಸಿದರು. ಅರ್ಜುನನ ಲಾರಿ ಹುಡುಕಾಟಕ್ಕೆ 1 ಕೋಟಿ ರೂ ಹಣ ಪಡೆದ ಕಂಪನಿಯವರು ನಿಮ್ಮ ಅಗತ್ಯವಿಲ್ಲ ಎಂದು ಈಶ್ವರ ಮಲ್ಪೆ ಅವರಿಗೆ ತಿಳಿಸಿದ್ದು ಇದರಿಂದ ಈಶ್ವರ ಮಲ್ಪೆ ಬೇಸರಗೊಂಡರು.

‘ಮಣ್ಣು ತೆಗೆಯುವ ಮೊದಲು ನೀರಿನ ಒಳಗೆ ಒಮ್ಮೆ ನೋಡಿ ಬರುವೆ ಮಣ್ಣು ತೆಗೆಯುವಾಗ ರಾಡಿ ಆದರೆ ನಂತರ ನೀರಿನೊಳಗಿನ ವೀಕ್ಷಣೆ ಕಷ್ಟ’ ಎಂದು ಈಶ್ವರ ಮಲ್ಪೆ ಮನವಿ ಮಾಡಿದರೂ ಗುತ್ತಿಗೆ ಪಡೆದವರು ಅದಕ್ಕೆ ಒಪ್ಪಲಿಲ್ಲ. ‘ಸರ್ಕಾರಕ್ಕೆ ನಾವು ಫೋಟೋ ಕೊಡಬೇಕು’ ಎಂದ ಅವರು ಫೋಟೋ ಪ್ರಕ್ರಿಯೆ ಮುಗಿಸಿ ನದಿ ಆಳದ ಮಣ್ಣು ತೆಗೆಯಲು ಶುರು ಮಾಡಿದರು. ಮಣ್ಣು ಮಿಶ್ರಿತ ನೀರಿನ ಒಳಗೆ ಹುಡುಕಾಟ ಸಾಧ್ಯವಿಲ್ಲ ಎಂದು ಈಶ್ವರ ಮಲ್ಪೆ ಸೇತುವೆಯಿಂದ 500 ಮೀ ದೂರದಲ್ಲಿ ಹುಡುಕಾಟ ನಡೆಸಿದ್ದು, ಅಲ್ಲಿ ಗುಲಾಬಿ ಬಣ್ಣದ ಸ್ಕೂಟರ್ ಕಾಣಿಸಿದ. ಜೊತೆಗೆ 5 ಅಡಿ ಉದ್ದದ 20ಕ್ಕೂ ಅಧಿಕ ಮರದ ದಿಮ್ಮಿಗಳು ಅಲ್ಲಿ ಕಾಣಿಸಿವ ನೀರಿನ ಆಳದಲ್ಲಿರುವ ಆವಾಗ ಈಶ್ವರ ಮಲ್ಪೆ ಹಗ್ಗ ಕಟ್ಟಿ ಮೇಲ್ಬಂದಿದ್ದಾರೆ.

ಊರಿಗೆ ಹೊರಡಲಿರುವ ಮಲ್ಪೆ

‘ನಾನು ಹುಡುಕಿದ ಸ್ಥಳದಲ್ಲಿ ಮತ್ತೆ ಹುಡುಕಾಟ ನಡೆಸುವ ಗುತ್ತಿಗೆ ಕಂಪನಿಗೆ ಸರ್ಕಾರ 1 ಕೋಟಿ ರೂ ನೀಡಿದ ಈ ಹಣ ಪಡೆದ ಅವರು ಸರ್ಕಾರದಿಂದ ಬಿಡಿಗಾಸು ಪಡೆಯದೇ ಸ್ವಯಂ ಪ್ರೇರಣೆಯಿಂದ ಕಾರ್ಯಾಚರಣೆಗೆ ಬಂದ ನಮಗೆ ಅವಕಾಶ ಕೊಡುತ್ತಿಲ್ಲ. ಇದಕ್ಕಾಗಿ ಭಾನುವಾರ ಸಂಜೆ ನಾವು ಊರಿಗೆ ಮರಳಲಿದ್ದೇವೆ’ ಎಂದು ಈಶ್ವರ ಮಲ್ಪೆ ಬೇಸರದಿಂದ ನುಡಿದರು. ‘ಶಾಸಕರು ಹಾಗೂ ಜಿಲ್ಲಾಡಳಿತ ಕಾರ್ಯಾಚರಣೆಗೆ ನೆರವು ನೀಡುವಂತೆ ಮನವಿ ಮಾಡಿದರೂ ಗುತ್ತಿಗೆ ಕಂಪನಿ ನೀರನ್ನು ಕಲುಷಿತಗೊಳಿಸುತ್ತಿದೆ. ಯಾವ ಪ್ರದೇಶದಲ್ಲಿ ಏನಿದೆ? ಎಂದು ತಿಳಿದುಕೊಳ್ಳುವ ಮೊದಲೇ ಆ ಭಾಗದ ಮಣ್ಣು ತೆಗೆಯುತ್ತಿದೆ’ ಎಂದವರು ಹೇಳಿದರು.