ಜೋಯಿಡಾ :ಜೋಯಿಡಾ ತಾಲೂಕಿನ ರಾಮನಗರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಪಿಂಚಣಿ ಅದಾಲತ್

ಜೋಯಿಡಾ : ತಾಲೂಕಿನ ರಾಮನಗರದಲ್ಲಿ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದ ಆಶ್ರಯದಡಿ ತಹಶೀಲ್ದಾರ್ ಜುಬೀನ್ ಮಹಾಪಾತ್ರ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಗ್ರೇಡ್ 2 ತಹಶೀಲ್ದಾರ್ ರಾಜೇಶ್ ಚೌವ್ಹಾಣ್ ಅವರು ಚಾಲನೆಯನ್ನು ನೀಡಿ ಮಾತನಾಡುತ್ತಾ, ಪಿಂಚಣಿ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಿಂಚಣಿಗಾಗಿ ಮತ್ತು ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಕಚೇರಿ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಪರಿಣಾಮಕಾರಿಯಾಗಿದ್ದು, ಅರ್ಹ ಫಲಾನುಭವಿಗಳು ಈ ಅದಾಲತಿನ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿದ ಉಪ ತಹಶೀಲ್ದಾರ್ ಸಂಜೀವ್ ಭಜಂತ್ರಿಯವರು ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪಿಂಚಣಿಯೂ ಅತೀ ಪ್ರಮುಖವಾಗಿದೆ. ಆರ್ಥಿಕವಾಗಿ ದುರ್ಬಲರಿಗೆ, ಅಶಕ್ತರಿಗೆ ಆರ್ಥಿಕವಾಗಿ ನೆರವು ನೀಡುವ ಮಹತ್ವಪೂರ್ಣವಾದ ಈ ಯೋಜನೆಯ ಪ್ರಯೋಜನದಿಂದ ಅರ್ಹರು ವಂಚಿತರಾಗಬಾರದು ಹಾಗೂ ಪಿಂಚಣಿಯ ಕುರಿತಂತೆ ಪಿಂಚಣಿದಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಲೆಂದು ಈ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಕ್ಯಾಸಲ್ ರಾಕ್ ಉಪತಹಶೀಲ್ದಾರ್ ಅಶೋಕ್ ದಾಸರ್, ಗ್ರಾಮ ಆಡಳಿತಾಧಿಕಾರಿಗಳಾದ ಸಂತೋಷ್ ಮ್ಯಾಗೇರಿ, ಮೆಹಬೂಬು ತಾಳಿಕೋಟಿ, ಸೈಫನ್ ಸಾಬ್ ಬಂಟನೂರು ಉಪಸ್ಥಿತರಿದ್ದರು.

ಪಿಂಚಣಿ ಅದಾಲತ್ ನಲ್ಲಿ ಒಟ್ಟು 41 ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲಿಸಲಾಯ್ತು ಮತ್ತು ಸ್ಥಳದಲ್ಲೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯ್ತು.