ಹಳಿಯಾಳ : ಪಟ್ಟಣದ ಕೆ.ಎಲ್.ಎಸ್-ವಿಡಿಐಟಿ ಮಹಾ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಇಂದು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಯ್ತು.
ಕಾಲೇಜಿನ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರನೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಪ್ರಾಚಾರ್ಯರಾದ ಡಾ.ವಿ.ಎ.ಕುಲಕರ್ಣಿಯವರು ಜಗತ್ತಿನ ಪ್ರತಿಯೊಂದು ಜೀವಿಯು ಮರ ಗಿಡಗಳನ್ನು ಅವಲಂಭಿತವಾಗಿದೆ. ವೇಗವಾಗಿ ಬೆಳೆಯುತ್ತಿರುವ ಆಧುನೀಕತೆಯ ಭರಾಟೆಯಲ್ಲಿ ಸಮೃದ್ದ ಪರಿಸರ ವಿನಾಶದೆಡೆಗೆ ಸಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಸಮೃದ್ದ ಪರಿಸರವನ್ನು ಉಳಿಸಿ, ಸಂರಕ್ಷಿಸುವ ಮಹತ್ವದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಾವು ನೀವೆಲ್ಲರು ನಿರ್ವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಸ್.ಬಿ.ಕುಲಕರ್ಣಿ, ಕಾಲೇಜಿನ ಡೀನ್ ಮಂಜುನಾಥ್ ಹಾಗೂ ಕಾಲೇಜಿನ ಬೋಧಕ ವೃಂದ ಮತ್ತು ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.