ಸಿದ್ದಾಪುರ : ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಲು ಶಾಲೆಗೆ ತೆಂಗಿನ ಸಸಿ ದಾನ ನೀಡಿದ ಪರಿಸರ ಪ್ರೇಮಿ.

ಸಿದ್ದಾಪುರ : ವಿಶ್ವ ಪರಿಸರ ದಿನದ ನಿಮಿತ್ತ ಸ.ಕಿ.ಪ್ರಾ.ಶಾಲೆ ಮಳಲವಳ್ಳಿ ಯಲ್ಲಿ ಗಿಡ ನೆಡುವ ಮೂಲಕ ಜಾಗೃತಿ ಮೂಡಿಸಲಾಯಿತು.‌
ಶಾಲಾ ಮುಖ್ಯ ಶಿಕ್ಷಕಿ ಉಮಾ.ಎಸ್.ಕೊಡಿಯಾ ತೆಂಗಿನ ಸಸಿ ನೆಟ್ಟು ನೀರೆರೆಯುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.‌
ಸುರೇಶ.ನಾಯ್ಕ ಮಳಲವಳ್ಳಿ ಇವರು ಶಾಲೆಗೆ ಸಸಿಗಳನ್ನ ದಾನದ ರೂಪದಲ್ಲಿ ನೀಡಿ ಪರಿಸರ ಜಾಗೃತಿ ಮೆರೆದರು.
ಮಕ್ಕಳಿಗೆ ಪರಿಸರ ದಿನದ ಮಹತ್ವ ಶಿಕ್ಷಕ‌ ಎಂ.ಡಿ.ನಾಯ್ಕ‌ ವಿವರಿಸಿದರು.ಪೋಷಣ ಅಭಿಯಾನದ ನೇತ್ರಾವತಿ,ಅನಿತಾ,‌ ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಕಲಾ,‌ಬಂಗಾರಿ‌ ಉಪಸ್ಥಿತರಿದ್ದರು.
ಶಾಲಾ‌ಮಕ್ಕಳು ಸಂತೋಷದಿಂದ ತಾವು ತಂದ ಗಿಡಗಳ ಆರೈಕೆಯಲ್ಲಿ ಕಾಳಜಿ ವಹಿಸುವಂತೆ ಸಿದ್ದರಾದರು.