ಸಿದ್ದಾಪುರ : ನಾವೆಲ್ಲರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಾಗಿದೆ ನ್ಯಾ. ತಿಮ್ಮಯ್ಯ ಜಿ.

ಸಿದ್ದಾಪುರ : ಗಿಡ ಮರಗಳನ್ನು ಬದುಕಿಸಿದರೆ ನಮ್ಮ ಬದುಕು ಹಸನಾಗುತ್ತದೆ. ಪರಿಸರ ರಕ್ಷಣೆಯ ಜವಾಬ್ದಾರಿಯನ್ನ ಮರೆತರೆ ಮುಂದೊಂದು ದಿನ ಅಪಾಯ ಎದುರಿಸಬೇಕಾಗುತ್ತದೆ. ವಾತಾವರಣದಲ್ಲಿ ವ್ಯತ್ಯಾಸವಾಗುತ್ತಿರುವುದು ಪರಿಸರ ಸಂರಕ್ಷಣೆ ಮಾಡದೇ ಇರುವುದಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ ರವರು ಹೇಳಿದರು.

ಅವರು ಪಟ್ಟಣ ಪಂಚಾಯತ್ ನ ಆರ್ ಆರ್ ಆರ್ ಕೇಂದ್ರದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಯಾವುದಾದರೂ ಕಾರ್ಯಕ್ರಮಕ್ಕೆ ಹೋದಲ್ಲಿ ಜಾಗವಿದ್ದರೆ ಗಿಡ ನೀಡುವಂತಹ ಕಾರ್ಯಕ್ರಮವನ್ನು ಮಾಡಿ,
ಇತ್ತೀಚಿನ ದಿನಗಳಲ್ಲಿ ನೀರಿಗೆ ಬರ ಬರುತ್ತಿರುವುದು ಆತಂಕದ ವಿಷಯವಾಗಿದೆ. ನಾವೆಲ್ಲರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಾಗಿದೆ ಜೊತೆಗೆ ಮುಂದಿನ ತಲೆಮಾರಿನವರಿಗೆ ಪರಿಸರ ಜಾಗೃತಿಯ ಅರಿವು ಮೂಡಿಸಿ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಬೇಕಾಗಿದೆ ಎಂದರು.