ದಾಂಡೇಲಿ : ಸಿಐಟಿಯು ಸಂಘಟನೆಯ ಸಂಸ್ಥಾಪನಾ ದಿನದ ಅಂಗವಾಗಿ ನಗರದ ಸಿಐಟಿಯು ಸಭಾಭವನದಲ್ಲಿ ಸಿಐಟಿಯು ಮತ್ತು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ಸಂಘಟನಾ ಸಭೆಯನ್ನು ಹಮ್ಮಿಕೊಳ್ಳಲಾಯ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಹರೀಶ ನಾಯ್ಕ ಅವರು ಸಿಐಟಿಯು ಈ ವರ್ಷ 53ನೇ ವರ್ಷದ ಸಂಸ್ಥಾಪನಾ ವರ್ಷದಲ್ಲಿದೆ. ಕಾರ್ಮಿಕರ ಐಕ್ಯತೆ, ಕಾರ್ಮಿಕರ ಭದ್ರತೆಗಾಗಿ ಸದಾ ಧ್ವನಿಯಾಗಿರುವ ಸಿಐಟಿಯು ಸಂಘಟನೆಯು ಕಾರ್ಮಿಕರ ಪರ ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ಮಾಡುತ್ತಲೆ ಬಂದಿದೆ. ನಿಸ್ವಾರ್ಥವಾಗಿ ಸೇವಾ ಮನೋಭಾವನೆಯನ್ನಿಟ್ಟುಕೊಂಡು ಮುನ್ನಡೆಯುವ ಸಂಘಟನೆ ಸಮಾಜದ ಆಸ್ತಿಯಾಗಬಲ್ಲದು. ಈ ನಿಟ್ಟಿನಲ್ಲಿ ಜನಪರ, ಕಾರ್ಮಿಕರ ಪರ ಸದಾ ಕಾಳಜಿ, ಚಿಂತನೆಯನ್ನು ಮಾಡುವ ಸಿಐಟಿಯು ಸಂಘಟನೆಯ ಉದ್ದೇಶವನ್ನು ಎಲ್ಲರು ತಿಳಿದು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಯು.ಎಸ್.ಪಾಟೀಲ್ ಮತ್ತು ಸಂದೇಶ್.ಎಸ್.ಜೈನ್ ಬಾಗವಹಿಸಿದ್ದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿಯ ಸದಸ್ಯರಾದ ಜಗದೀಶ್ ನಾಯ್ಕ ವಹಿಸಿದ್ದರು.
ವೇದಿಕೆಯಲ್ಲಿ ಸಂಘಟನೆಯ ಮುಖಂಡರುಗಳಾದ ಆರ್.ಎಂ.ಮುಲ್ಲಾ, ಹನುಮಂತ್ ಸಿಂಧಗಿ, ಪದ್ಮಾ ಕಾಳೆ, ಕೃಷ್ಣ ಭಟ್, ಪ್ರಭಾಕರ್ ಅಮ್ಟೇಕರ್, ರಾಮಾಂಜನೇಯ ಮೊದಲಾದವರು ಉಪಸ್ಥಿತರಿದ್ದರು.
ಸಿಐಟಿಯು ತಾಲ್ಲೂಕು ಸಂಚಾಲಕರಾದ ಸಲೀಂ ಸೈಯದ್ ಅವರು ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮಕ್ಕೆ ಝೆಡ್ ದೇವರಾಜು ವಂದಿಸಿದರು.