ಜೋಯಿಡಾ :ಭರದಿಂದ ಸಾಗುತ್ತಿರುವ ಕೊಂಬಾ ದೇವರಮನೆ ರಸ್ತೆ ಕಾಮಗಾರಿ

ಜೋಯಿಡಾ : ಜೋಯಿಡಾ ತಾಲ್ಲೂಕಿನ ನಂದಿಗದ್ದಾ ಗ್ರಾಮ ಪಂಚಾಯ್ತು ವ್ಯಾಪ್ತಿಯ ಕೊಂಬಾ ದೇವರಮನೆ

ರಸ್ತೆ ಕಾಮಗಾರಿಯೂ ಭರದಿಂದ ಸಾಗುತ್ತಿದ್ದು, ಶಾಸಕ ಆರ್.ವಿ.ದೇಶಪಾಂಡೆಯವರು ವಿಶೇಷ ಮುತುವರ್ಜಿ ವಹಿಸಿ ಜಿ.ಪಂ ಇಲಾಖೆಯಡಿ ಈ ರಸ್ತೆ ಕಾಮಗಾರಿಗೆ ಅನುದಾನವನ್ನು ಮಂಜೂರು ಮಾಡಿಸಿದ್ದರು.

ಕಳೆದ ಅನೇಕ ವರ್ಷಗಳಿಂದ ಇಲ್ಲಿಗೆ ರಸ್ತೆ ಬೇಕೆಂಬ ಬೇಡಿಕೆ ದೇವರಮನೆ ಜನತೆಯದ್ದಾಗಿದ್ದು, ಇಲ್ಲಿಯ ಜನತೆಯ ಬೇಡಿಕೆಗೆ ನಂದಿಗದ್ದಾ ಗ್ರಾಮ ಪಂಚಾಯ್ತು ಹಾಗೂ ಸ್ಥಳೀಯರು ಶಾಸಕ ಆರ್.ವಿ.ದೇಶಪಾಂಡೆಯವರ ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಟ್ಟಿನಲ್ಲಿ ಬಹುವರ್ಷಗಳ ಬೇಡಿಕೆ ಈಡೇರಿದ ಸಂತಸ ಸ್ಥಳೀಯ ಜನತೆಯದ್ದಾಗಿದೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ವಾರದೊಳಗೆ ಕಾಮಗಾರಿ ಸಂಪೂರ್ಣ ಮುಗಿದು, ಬಳಕೆಗೆ ಅನುವು ಸಿಗಲಿದೆ.