ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಲ್ಲಿ ಜೂನ್:02ನೇ ವಾರದಿಂದ ಊಟ, ವಸತಿ ಸಹಿತ ಉಚಿತವಾಗಿ ಬಹು ಬೇಡಿಕೆಯ ಜೂಟ್ ಉತ್ಪನ್ನಗಳ ತಯಾರಿಕಾ ತರಬೇತಿ ಕಾರ್ಯಕ್ರಮವನ್ನು ದಾಂಡೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಈ ಕೂಡಲೆ ಅರ್ಜಿ ಸಲ್ಲಿಸುವಂತೆ ಹಳಿಯಾಳ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಇಂದು ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು 13 ದಿನಗಳವರೆಗೆ ನಡೆಯಲಿರುವ ಈ ತರಬೇತಿಯಲ್ಲಿ ಜೂಟ್ ನಿಂದ ತಯಾರಿಸುವ ವಿವಿಧ ವಿನ್ಯಾಸದ, ಆಕರ್ಷಕವಾಗಿರುವ ಬ್ಯಾಗ್ ಗಳು, ಪರ್ಸ್ ಗಳು, ವೆನಿಟ್ ಬ್ಯಾಗ್, ಕಚೇರಿ ಬ್ಯಾಗ್ ಹೀಗೆ ಇನ್ನಿತರ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವ ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ. ಅನುಭವಿ ಮತ್ತು ನುರಿತ ತರಬೇತುದಾರರಿಂದ ಈ ತರಬೇತಿ ನಡೆಯಲಿದ್ದು, ಊಟ, ವಸತಿಯೊಂದಿಗೆ ತರಬೇತಿಯೂ ಸಂಪೂರ್ಣ ಉಚಿತವಾಗಿರುತ್ತದೆ. ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತರಿರುವ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರು, ಪುರುಷರು ತಮ್ಮ ಹೆಸರು ಮತ್ತು ವಿಳಾಸವನ್ನು ಮೊಬೈಲ್ ವಾಟ್ಸಪ್ ಸಂಖ್ಯೆ :9449782425 ಗೆ ವಾಟ್ಸಪ್ ಮಾಡುವಂತೆಯು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9482188780 ಗೆ ಸಂಪರ್ಕಿಸುವಂತೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.