ದಾಂಡೇಲಿಯ ಟೌನ್ ಶಿಪ್’ನ ಮನೆಯೊಂದರ ಆವರಣದಲ್ಲಿ ಅರಳಿ ನಿಂತ ಬ್ರಹ್ಮ ಕಮಲ.

ದಾಂಡೇಲಿ : ನಗರದ ಟೌನ್ ಶಿಪ್ ನಲ್ಲಿರುವ ಕಸ್ತೂರಿ ಕಾಂಬಳೆ ಎಂಬವರ ಮನೆಯ ಆವರಣದಲ್ಲಿ ಭಾನುವಾರ ತಡರಾತ್ರಿ ಬ್ರಹ್ಮ ಕಮಲದ ಗಿಡದಿಂದ ಬ್ರಹ್ಮ ಕಮಲಗಳು ಅರಳಿ ನಿಂತು ಸ್ಥಳೀಯ ಸುತ್ತಮುತ್ತಲ ಜನತೆಯ ಗಮನ ಸೆಳೆದಿದೆ.

ಹಾಗೆ ನೋಡಿದರೆ, ಬ್ರಹ್ಮ ಕಮಲ ರಾತ್ರಿ 11 ಗಂಟೆಯ ಬಳಿಕ ಅರಳಿ ಬೆಳಗಾಗುವುದರೊಳಗೆ ಕಮರಿ ಹೋಗುತ್ತದೆ. ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಎಲೆ ಇದು. ಕಾಂಡವೆ ಎಲೆಯಾಗಿ, ಎಲೆಯೆ ಹೂವಾಗಿ ಅರಳುವ ಈ ಬ್ರಹ್ಮ ಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ. ಸೌಂದರ್ಯಕ್ಕಿಂತಲೂ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಬ್ರಹ್ಮ ಕಮಲ ಅರಳುತ್ತಿದ್ದಂತೆ ಕಸ್ತೂರಿ ಕಾಂಬಳೆಯವರು ಮತ್ತು ಅಕ್ಕಪಕ್ಕದ ಮನೆ ಮಂದಿಯೆಲ್ಲ ಸೇರಿ ಸಂಭ್ರಮಿಸಿ ಹೂವಿನ ಗಿಡಕ್ಕೆ ಮತ್ತು ಹೂವುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.