ಅಂಕೋಲಾ : ಬಂಡಿಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಯ ಮೇಲೆ ವಿವಾದಾತ್ಮಕ ಪೋಸ್ಟರ ಅಂಟಿಸಿದ ಆರೋಪ :ಒರ್ವನಬಂಧನ

ಅಂಕೋಲಾ : ಇಲ್ಲಿನ ಬಂಡಿಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಯ ಮೇಲೆ ವಿವಾದಾತ್ಮಕ ಪೋಸ್ಟರ ಅಂಟಿಸಿದ ಆರೋಪದ ಮೇಲೆ ಒರ್ವನನ್ನು ಬಂಧಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕನಸಿಗದ್ದೆಯ ಇಕ್ಬಾಲ ಅಬ್ದುಲ ಖಾದರ ಅವರನ್ನು ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಆರೋಪದ ಮೇಲೆ ವಶಕ್ಕೆ ಪಡೆದು ಬಂಧಿಸಲಾಗಿದೆ‌

ನಡೆದ್ದದ್ದೇನು..
ಭಾನುವಾರ ಬೆಳಿಗ್ಗೆ ಈ ವಿವಾದಾತ್ಮಕ ಪೋಸ್ಟರ ಗೋಡೆಯ ಮೇಲೆ ಇದ್ದದ್ದನ್ನು ಹಲವರು ಇದನ್ನು ಗಮನಿಸಿದ್ದಾರೆ.

ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರನಿಂದ ಬರೆದಿರುವ ಬರಹಗಳಿವೆ. ಇಂಗ್ಲೀಷಿನಲ್ಲಿ ಬರೆದಿರುವ ಬರಹ ನಿಗೂಢವಾಗಿದ್ದು ಓದಿದರೆ ಸರಿಯಾಗಿ ಅರ್ಥವಾಗುತ್ತಿಲ್ಲ. ಮೇಲ್ಗಡೆ ಸಂಗ್ಲಾನಿ ವೆಲಫರ್ ಟ್ರಸ್ಟ್ ಎಂದು ಬರೆದಿದ್ದು ಅದರ ಕೆಳಗೆ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ಬರೆಯಲಾಗಿದೆ. ಮುಂದಿನ ಬರಹಗಳು ನಿಗೂಢವಾಗಿದೆ.

ಕೆಲವು ಹೈಸ್ಕೂಲ್ ಮತ್ತು ಟ್ರಸ್ಟಗಳ ಹೆಸರುಗಳನ್ನು ಬರೆದಿದ್ದು ಫಾರೆಸ್ಟ, ಪೊಲೀಸ್ ಶಬ್ದಗಳನ್ನೂ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಬರೆಯಲಾಗಿದೆ. ಇನ್ನೊಂದು ಪೋಸ್ಟರನಲ್ಲಿ ಬರೆದಿದ್ದು ಅಲ್ಪ ಸ್ವಲ್ಪ ಅಳಿಸಿ ಹೋಗಿದೆ.

ಮೂರನೆ ಪೋಸ್ಟರನಲ್ಲಿ ಹೈಸ್ಕೂಲ ಗರ್ಲ್ಸ ಎಂಡ್ ಬಾಯ್ಸ ಎಂದು ಬರೆಯಲಾಗಿದೆ. ಹಾಗೂ ನೂರು ಬಿಲಿಯನ್ ಡಾಲರ್ ಎಂದೂ ಬರೆಯಲಾಗಿದೆ.

ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ಕನಸಿಗದ್ದೆಯ ಇಕ್ಬಾಲ ಶೇಖ ಅವರನ್ನು ಬಂಧಿಸಿದ್ದಾರೆ.

ಸಿಪಿಐ ಜಾಕ್ಸ್ನನ ಡಿಸೋಜಾ ಪ್ರತಿಕೃಯಿಸಿ ವಿವಾದಾತ್ಮಕ ಪೋಸ್ಟರ ಅಂಟಿಸಿದ ಆರೋಪದ‌ ಮೇಲೆ ಒರ್ವನನ್ನು ಬಂಧಿಸಿ, ಆರೋಪಿತನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.