ಸಿದ್ದಾಪುರ : ಉಪನಯನ ಸಂಸ್ಕಾರದಿಂದ ಸನ್ಮಾರ್ಗ ದತ್ತ ಸಾಗಲು ಸಾಧ್ಯಕರ್ಕಿ ಸಚ್ಚಿದಾನಂದ ಶ್ರೀ.

ಸಿದ್ದಾಪುರ …ಉಪನಯನ ಎಂದರೆ ಆಚಾರ್ಯರ ಸಮೀಪಕ್ಕೆ ಉಪದೇಶಕ್ಕಾಗಿ ಆಗಮಿಸುವುದು.ವೇದಅಧ್ಯಯನಕ್ಕಾಗಿ ಬಾಲಕನನ್ನು ಗುರುವಿನ ಹತ್ತಿರ ಕಳುಹಿಸಿಕೊಡಲು ಮಾಡುವ ಒಂದು ಸಂಸ್ಕಾರ.ಇದರಲ್ಲಿ ಮುಖ್ಯವಾದದ್ದು ಗಾಯತ್ರಿ ಮಂತ್ರೋಪದೇಶ ಮತ್ತು ಬ್ರಹ್ಮಚರ್ಯ ವ್ರತ ದಿಕ್ಷೆ .ಯಜ್ಞೋಪವಿತ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ.ಯಜ್ಞೋ ಪವಿತಧಾರಣೆಯು ವ್ಯಕ್ತಿಯ ಅಂತಃ ಪ್ರೇರಣೆ ಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಎಂದು ಕರ್ಕಿಯ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ನುಡಿದರು.
ಪಟ್ಟಣದಲ್ಲಿ ಬ್ರಹ್ಮೋಪದೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವಿನಾಯಕ್ ಶೇಟ ದಂಪತಿಗಳು ಪಾದಪೂಜೆ ನೆರವೇರಿಸಿ ಶ್ರೀಗಳಿಗೆ ಫಲ ತಾಂಬೂಲ ಸ್ಮರಣೆಕೆ ನೀಡಿ ಗೌರವಿಸಿದರು.ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧು ಮಿತ್ರರು ಹಾಗೂ ಭಕ್ತಾದಿಗಳಿಗೆ ಶ್ರೀಗಳು ಮಂತ್ರಾಕ್ಷತೆ ಅನುಗ್ರಹಿಸಿ ಆಶೀರ್ವದಿಸಿದರು.ಕುಮಾರಿ ದೀಪ್ತಿ ವಿನಾಯಕ್ ಶೇಟ ಪ್ರಾರ್ಥನಾ ಗೀತೆ ಹಾಡಿದರು.ಕುಟುಂಬದ ಹಿರಿಯ ಸದಸ್ಯ ಡಿ.ಎನ್. ಶೇಟ್ ಸ್ವಾಗತಿಸಿದರು. ವಿನಾಯಕ ಶೇಟ ಪ್ರಾಸ್ತಾವಿಕ ಮಾತನಾಡಿದರು.ಮಂಜುನಾಥ್ ವಿ. ಶೇಟ್ ಆಭಾರ ಮನ್ನಿಸಿದರು