ದಾಂಡೇಲಿ :ಅಂಬೇವಾಡಿಯ ಮನೆಯೊಂದರ ಆವರಣದಲ್ಲಿ ಹಾವು ಪ್ರತ್ಯಕ್ಷ- ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದ ಉರಗ ಪ್ರೇಮಿ ರಜಾಕ್ ಶಾ

ದಾಂಡೇಲಿ : ನಗರದ ಬರ್ಚಿ ರಸ್ತೆಯಲ್ಲಿ ಬರುವ ಅಂಬೇವಾಡಿಯ ಮನೆಯೊಂದರ ಆವರಣದಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಅಂಬೇವಾಡಿಯ ನಿವಾಸಿ ಅಬ್ಬುಬಕ್ಕರ್ ಅಬ್ದುಲ್ ರೆಹಮಾನ್ ಕುಟ್ಟಿ ಎಂಬವರ ಮನೆಯ ಆವರಣದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಹಾವನ್ನು ನೋಡಿದೊಡನೆಯೆ ನಗರದ ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಬರುವುದೊರಳಗೆ ಹಾವು ಅಲ್ಲೆ ಇದ್ದ ಹೊಂಡದಲ್ಲಿ ಅವಿತು ಕೂತಿತ್ತು. ಸ್ಥಳಕ್ಕೆ ಬಂದ ರಜಾಕ್ ಶಾ ಅವರು ನಾಗರಾಜ್ ಗಾಂಧಿನಗರ ಅವರ ಸಹಕಾರದಲ್ಲಿ ಹಾವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ. ರಜಾಕ್ ಶಾ ಅವರು ಕಳೆದ ಹಲವಾರು ವರ್ಷಗಳಿಂದ ದಾಂಡೇಲಿ, ಜೋಯಿಡಾ, ಹಳಿಯಾಳ ಸುತ್ತಮುತ್ತಲು ಮಾತ್ರವಲ್ಲದೇ ಕಾರವಾರದವರೆಗೆ ಹೋಗಿ ಹಾವುಗಳು ರಕ್ಷಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಾಡಿಗೆ ಬಂದಿದ್ದ ಮೊಸಳೆಯನ್ನು ಮರಳಿ ನದಿಗೆ ಸೇರಿಸಿ ಸಾಹಸ ಮೆರೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.