ದಾಂಡೇಲಿ :ನನ್ನ ಜೀವನ ನನ್ನ ಸ್ವಚ್ಚ ನಗರ ಜಾಗೃತಿ ಅಭಿಯಾನ

ದಾಂಡೇಲಿ : ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ನಗರ-2.0 ಯೋಜನೆಯಡಿ ಮೇರಿ ಲೈಪ್ ಸ್ಟೈಲ್ ಫಾರ್ ಎನ್ವಯರ್ನಮೆಂಟ್, ಮೇರಾ ಸ್ವಚ್ಛ ಶೆಹರ್ ಯೋಜನೆಯ ನನ್ನ ಲೈಪ್ ನನ್ನ ಸ್ವಚ್ಛ ಶೆಹರ್ ಕಾರ್ಯಕ್ರಮದಡಿ ನಗರ ಸಭೆಯ ನೇತೃತ್ವದಲ್ಲಿ ಬುಧವಾರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯ್ತು.

ನಗರ ಸಭೆಯ ಆವರಣದಿಂದ ಆರಂಭಗೊಂಡ ಈ ಜಾಗೃತಿ ಅಭಿಯಾನದಲ್ಲಿ ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ, ನಗರ ಸಭೆಯ ಅಧಿಕಾರಿಗಳಾದ ವಿ.ಎಸ್.ಕುಲಕರ್ಣಿ, ಮೈಕಲ್ ಫರ್ನಾಂಡೀಸ್, ಬಾಲು ಗವಾಸ್, ಶುಭಂ, ಸುನೀತಾ ನಾಯ್ಕ, ವಿಲಾಸ್ ದೇವಕರ್, ಕರಣ್ ಜೋಶಿ, ಉಲ್ಲಾಸ್ ಬಾಂದೇಕರ್, ಹನುಮಂತ್ ಉಪ್ಪಾರ್, ಫಿಲೀಪ್ ಮಾದರ್, ಶ್ರೀಶೈಲ್ ಹಿರೇಮಠ್, ಸುರೇಶ್, ಕಿರಣ್, ನಾಗರಾಜ ತೇರದಾಳ, ಆದಿನಾರಾಯಣ, ಹಾಗೂ ನಗರ ಸಭೆಯ ಸಿಬ್ಬಂದಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು. ನಗರ ಸಭೆಯಿಂದ ಆರಂಭಗೊಂಡ ಈ ಜಾಗೃತಿ ಅಭಿಯಾನವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸ್ವಚ್ಚತೆಯ ಬಗ್ಗೆ ಜನಜಾಗೃತಿಯನ್ನು ಮೂಡಿಸಿತು.