ಜೋಯಿಡಾ : ತಾಲ್ಲೂಕಿನ ಗಣೇಶಗುಡಿ ಉಪ ಕೇಂದ್ರ ಹಾಗೂ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣೆ ಕಾರ್ಯವು ಇಂದು ಮಂಗಳವಾರ ಬೆಳಿಗ್ಗೆ ಸಂಜೆಯವರೆಗೆ ಯಶಸ್ವಿಯಾಗಿ ಜರುಗಿತು.
ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಜೋಯಿಡಾ, ಕುಂಬಾರವಾಡ, ಉಳವಿ, ನಂದಿಗದ್ದೆ, ಅಣಶಿ, ನಾಗೋಡಾ, ಗಾಂಗೋಡಾ, ಪ್ರಧಾನಿ, ಅವೇಡಾ, ಸಿಂಗರಗಾವ್ ಮತ್ತು ಜಗಲ್ಬೇಟ್ ಗ್ರಾ.ಪಂ ವ್ಯಾಪ್ತಿಯಲ್ಲಿ ಹೆಸ್ಕಾಂ ಶಾಖಾಧಿಕಾರಿ ಜೋಸೆಫ್ ಫೆರ್ನಾಂಡೀಸ್ ಅವರ ನೇತೃತ್ವದಡಿ ಹೆಸ್ಕಾಂ ಪವರ್ ಮ್ಯಾನ್ ಗಳಾದ ಸುಭಾಷ್, ಬಾಳೇಶ್, ಶಿವಾಜಿ, ಮಾರುತಿ, ಮಹಾಂತಯ್ಯ, ಮೌಲನಾ, ಜಗದೀಶ್, ಸಾಗರ್, ಶಾನೂರು, ಗೋವಿಂದ ಗೌಡ, ಗೋಕುಲ್, ದಿನೇಶ್, ಮಹಾಂತೇಶ್, ಚೇತನ್ ಹಾಗೂ ಹೆಸ್ಕಾಂ ಗುತ್ತಿಗೆ ಸಿಬ್ಬಂದಿಗಳಾದ ಅರವಿಂದ್, ಸಂತೋಷ್, ಮಹೇಶ್, ರಾಜನ್, ಸುಭಾನಿ, ವೀರೇಂದ್ರ, ಮೋಹನ, ಸಂತಾನ್ ಮೊದಲಾದವರ ತಂಡ ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರಮವಹಿಸಿ ದುಡಿದು ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣೆ, ಹಳೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳ ಅಳವಡಿಕೆ ಹೀಗೆ ಮೊದಲಾದ ಅವಶ್ಯ ದುರಸ್ತಿ ಕಾರ್ಯದಲ್ಲಿ ಸಮರ್ಪಣಾಭಾವದಿಂದ ತಮ್ಮನ್ನು ತಾವು ತೊಡಗಿಸಿಕೊಂಡು ತಾಲ್ಲೂಕಿನ ಜನತೆಯ ಮೆಚ್ಚುಗೆ ಮತ್ತು ಅಭಿಮಾನಕ್ಕೆ ಪಾತ್ರರಾದರು.