ಅಂಕೋಲಾ ; ತಾಲೂಕಿನ ಅವರ್ಸಾ ಪಂಚ ಗ್ರಾಮದ ಶ್ರೀ ಭೂದೇವಿ ದೇವರ ಬಂಡಿ ಹಬ್ಬವು ಸಹಸ್ರಾರು ಭಕ್ತಾಧಿಗಳ ಹರ್ಷೋದ್ಘಾರದ ನಡುವೆ ಸಂಭ್ರಮ ಸಡಗರದಿಂದ ಮಂಗಳವಾರ ಸಂಜೆ ನಡೆಯಿತು.
ಅರಭಿ ಸಮುದ್ರದಲ್ಲಿ ಸೂರ್ಯ ತನ್ನ ಕರ್ತವ್ಯ ಮುಗಿಸಿ ಅಸ್ತಂಗತನಾಗುತ್ತಿದ್ದಂತೆ, ಇತ್ತ ಶ್ರೀ ಭೂದೇವಿಯ ಚಿನ್ನದ ಅಲಂಕಾರ ಭೂಷಿತ ಕಳಸವು ಶ್ರೀ ದೇವರ ದೇವಸ್ಥಾನದಿಂದ ಸಾಗಿ ಬಂದಿತು.
ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಎದುರು ಶ್ರೀ ದೇವರ ಕಳಸ ತಿರುಗುವ ಅಭೂತಪೂರ್ವ ರೋಮಾಂಚಕಕಾರಿ ದೃಶ್ಯವನ್ನು ನೋಡಲು ಸಾವಿರಾರು ಭಕ್ತಾಧಿಗಳು ನರೆದಿದ್ದರು.
ನಂತರ ಶ್ರೀ ಬೀದಿ ದೇವಸ್ಥಾನದ ಎದುರು ದಿ. ಶ್ಯಾಮುಮನೆ ಕುಟುಂಬದಿಂದ ಕೈ ಆರತಿ ಸಮರ್ಪಿಸುವ ಧಾರ್ಮಿಕ ಪದ್ದತಿ ಸಾಂಘವಾಗಿ ನಡೆಯಿತು.
ಶ್ರೀ ದೇವರ ಕಳಸವು ಶ್ರೀ ಕಳಸ ದೇವಸ್ಥಾನದಲ್ಲಿ ವಿರಾಜಮಿಸಿತು. ಅವರ್ಸಾ ಪಂಚಗ್ರಾಮವಾದ ಹಟ್ಟಿಕೇರಿ, ಹಾರವಾಡ, ಅವರ್ಸಾ, ಸಕಲಬೇಣ, ದಂಡೇಭಾಗ ಭಾಗದ ನಾಗರಿಕರು ಸೇರಿದಂತೆ ನಾಡು-ಹೊರ ನಾಡಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಧನ್ಯತಾಭಾವ ಸಮರ್ಪಿಸಿದರು.
ಮೇ. 24 ರಂ ಬುಧವಾರ ಶ್ರೀ ದೇವರ ಪರಿವಾರ ದೇವತಗಳಿಗೆ ಸಾಂಪ್ರದಾಯಿಕ ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.