ಅಂಕೋಲಾ : ತಾಲೂಕಿನ ಬೆಳಂಬಾರದ ಸನಿಹ ಅರಬ್ಬೀ ಸಮುದ್ರದಲ್ಲಿ ಬಿರುಗಾಳಿಯ ರಭಸಕ್ಕೆ ಮೀನುಗಾರಿಕಾ ಬೋಟ ಮುಳುಗಿದ ಘಟನೆ ನಡೆದಿದೆ
ಚಂದ್ರಾವತಿ ಸುಭಾಶ್ ಕಾರ್ವಿ ಬೆಳಂಬಾರ ರವರಿಗೆ ಸೇರಿದ ಬೋಟ್ ಇದಾಗಿದ್ದು ಸರಿ ಸುಮಾರು 1.5 ಕೋಟಿಯಷ್ಟು ಹಾನಿ ಸಂಭವಿಸಿದೆ.
ನಡೆದಿದ್ದೇನು.?
ಮೀನುಗಾರಿಕೆಗೆ ಹೋಗುವ ಬೋಟ್ ಗಳನ್ನು ಊರಿನ ಸನಿಹ ಸಮುದ್ರದಂಚಿಗೆ ನಿಲ್ಲಿಸಿರುತ್ತಾರೆ. ನಂತರ ಮೀನುಗಾರಿಕೆಗೆ ತೆರಳುತ್ತಾರೆ ಮೀನುಗಾರಿಕೆ ಮಾಡುತ್ತಿರುವಾಗ ಈ ಬೋಟಗೆ ವೇಗವಾಗಿ ಬಂದ ಬಿರುಗಾಳಿ ಅಪ್ಪಳಿಸಿ , ದೊಡ್ಡದಾದ ತೆರೆಗಳು ಬಡಿದು ಬೋಟನ ತಳದ ಫೈಬರ್ ಕಿತ್ತಿದ್ದು ನೀರು ಒಳ ನುಗ್ಗಿ ನೋಡು ನೋಡುತ್ತಿದ್ದಂತೆ ಬೋಟ್ ಮಾಲಕರ ಕಣ್ಣೆದುರಿಗೆ ಸಮುದ್ರದಲ್ಲಿ ಮುಳುಗಿ ಹೋಗಿದೆ.
ಬೇರೆ ಬೋಟನಿಂದ ಕಾರ್ಮಿಕರ ರಕ್ಷಣೆ.
ಬೆಳಂಬಾರ ಗ್ರಾಮದ ಗಿರಿಯಾ ಗಣಪತಿ ಕಾರ್ವಿ ಎನ್ನುವವರ ಬೋಟ್ ಸಹಾಯದಿಂದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಇಂಡಿಯಾ ಕೆ ಎ 7 ಎಂ ಎಂ1552 ನಂಬರಿನ ಬೋಟ್ ಇದಾಗಿದ್ದು ಜೈ ಶ್ರೀ ರಾಮ ಎಂಬ ಹೆಸರಿನ ಬೋಟ್ ಇದಾಗಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಳುಗಿದ ಬೋಟ್ ಗೆ ನೆರವು ಬೇಕಿದೆ.
ಕೋಟ
ನಮ್ಮ ಜೀವನಕ್ಕೆ ಆಸರೆಯಾಗಿದ್ದ ಬೋಟ್ ಮುಳುಗಿದೆ. ನಮಗೆ ಸರಕಾರ ಸಹಕಾರ ನೀಡಬೇಕು. ಬ್ಯಾಂಕ್ ಮತ್ತು ಇತರೆ ಕಡೆಗಳಲ್ಲಿ ಸಾಲ ಮಾಡಿ ಈ ಬೋಟ್ ಖರಿದಿಸಿದ್ದೆ. ಇಲಾಖೆ ನೆರವು ನೀಡಲಿ.
ಚಂದ್ರವತಿ ಕಾರ್ವಿ.ಮಾಲಕರು