ಶಿವಮೊಗ್ಗ: ಎನ್ಐಎ ಅಧಿಕಾರಿಗಳು ತುಂಗಾ ತಟದ ಟ್ರಯಲ್ ಬ್ಲಾಸ್ಟ್ ಪ್ರಕರಣ ಮತ್ತು ಐಎಸ್ಐಎಸ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂದು ಎನ್ಐಎ ಅಧಿಕಾರಿಗಳು ಮತ್ತಿಬ್ಬರು ಶಂಕಿತ ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ದ.ಕನ್ನಡ ಜಿಲ್ಲೆ ಪೆರ್ಮಣ್ಣೂರಿನ ಶಂಕಿತ ಉಗ್ರ ಮಜಿನ್ ಅಬ್ದುಲ್ ರಹಮಾನ್ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ನದೀಂ ಅಹ್ಮದ್ ಕೆಎ ಬಂಧಿತರು.
ಬಂಧಿತ ಇಬ್ಬರು ಆರೋಪಿಗಳು ಮಾಜ್ ಮುನೀರ್, ಸೈಯದ್ ಯಾಸೀನ್ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಮಾಜ್ ಮುನೀರ್, ಸೈಯದ್ ಯಾಸೀನ್ ಬಂಧಿತ ಇಬ್ಬರನ್ನು ಉಗ್ರ ಚಟುವಟಿಕೆಗಳಿಗೆ ನೇಮಿಸಿಕೊಂಡಿದ್ದರು. ಈಗಾಗಲೇ ಎನ್ಐಎ ಇವರಿಬ್ಬರು ಸೇರಿ ನಾಲ್ವರನ್ನು ಬಂಧಿಸಿದೆ. ಕಳೆದ ಕೆಲ ದಿನಗಳ ಹಿಂದೆ ಎನ್ಐಎ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ಮಾಡಿ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು. ಈಗ ಮತ್ತಿಬ್ಬರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ