ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದ ಹಲವರ ಬಾಳು ಕತ್ತಲೆಯಾಗಿದೆ. ನಗರದ ಮಿಂಟೋ ಆಸ್ಪತ್ರೆ ಒಂದರಲ್ಲೇ ಪಟಾಕಿಯಿಂದ ಗಾಯಗೊಂಡ 27 ಕೇಸ್ ಗಳು, ನಾರಾಯಣ ನೇತ್ರಾಲಯದಲ್ಲಿ 45 ಕ್ಕೂ ಹೆಚ್ಚು ಕೇಸ್ ಗಳು, ಇನ್ನೂ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 100 ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ.
ಹಬ್ಬದ ಸಂಭ್ರಮದಲ್ಲಿ ಪಟಾಕಿ ಹಚ್ಚಿದವರಿಗಿಂತ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ, ನೋಡುತ್ತಾ ನಿಂತಿದ್ದವರಿಗೇ ಹೆಚ್ಚು ಸಮಸ್ಯೆಗೆ ಒಳಗಾಗಿದ್ದಾರೆ. ದೀಪಾವಳಿ ಮೂರನೇ ದಿನದ ಅಂತ್ಯದ ವೇಳೆಗೆ ನಗರವೊಂದರಲ್ಲೇ 100 ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದ್ದು, ತೀವ್ರವಾಗಿ ಹಾನಿಯಾಗಿರೋ ವ್ಯಕ್ತಿಗಳಿಗೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.