ಕಾರವಾರ: ನಿನ್ನೆ ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ 7-8 ದಿನದ ಮಗುವಿಗೆ ರಕ್ತದ ಕಣದ (ಪ್ಲೇಟ್ಲೆಟ್ಸ್) ರಕ್ತದ ಅವಶ್ಯಕತೆ ಇದ್ದು, ಆಸ್ಪತ್ರೆ ಸಿಬ್ಬಂದಿಗಳು ಶುಭಂ ಕಳಸ ರವರ ಶೇರ್ ಬ್ಲಡ್ ಸೇವ್ ಲೈಫ್ ತಂಡಕ್ಕೆ ಕರೆಮಾಡಿ ತಿಳಿಸಿದ್ದರು.
ಈ ವಿಷಯ ತಿಳಿದ ತಕ್ಷಣ ತಂಡದ ಸದಸ್ಯರಾದ ರಾಹುಲ್ ದೇವಿದಾಸ ನಾಯ್ಕ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸಿಬ್ಬಂದಿ ಬಸವರಾಜ್ , ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾದ ಅನಿಲ್ ಕುಮಾರ್, ಸುನಿಲ್ ಸೇರಿದಂತೆ ಋಷಿ ಈ ಐದು ಸದಸ್ಯರು ರಕ್ತದಾನ ಮಾಡಿ ಪುಟ್ಟ ಮಗುವಿನ ಚಿಕಿತ್ಸೆಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ರಕ್ತದಾನ ಮಾಡಿದ ಎಲ್ಲಾ ರಕ್ತದಾನ ಮಾಡಿದ ಎಲ್ಲಾ ಸದಸ್ಯರಿಗೂ ಶೇರ್ ಬ್ಲಡ್ ಸೇವ್ ಲೈಫ್ ತಂಡದ ಸಂಚಾಲಕ ಶುಭಂ ಕಳಸ ಧನ್ಯವಾದ ಸಲ್ಲಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ರಕ್ತದಾನಕ್ಕೆ ಅಥವಾ ಪಡೆಯಲು ಸಂಪರ್ಕಿಸಿ,
ಶುಭಂ ಜಿ ಕಳಸ
9113652005 / 7795299885