ವಾಟ್ಸ್​ಆ್ಯಪ್ ಅಪ್ಲಿಕೇಶನ್ ಸರ್ವರ್ ಡೌನ್.!

ನವದೆಹಲಿ: ವಿಶ್ವದಾದ್ಯಂತ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಸರ್ವರ್ ಡೌನ್ ಆದ ಹಿನ್ನೆಲೆ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಧ್ಯಾಹ್ನ 12:30 ನಂತರ ವಾಟ್ಸ್​ಆ್ಯಪ್ ಕಾರ್ಯದಲ್ಲಿ ವ್ಯತ್ಯಯವಾಗಿದೆ. ಅಲ್ಲದೇ ಆಂಡ್ರ್ಯಾಯ್ಡ್ , ಐಒಎಸ್ ಹಾಗೂ ವೆಬ್‌ ಅಪ್ಲಿಕೇಷನ್ಸ್‌ಗಳಲ್ಲೂ ಕೆಲಸ ನಿರ್ವಹಿಸುತ್ತಿಲ್ಲ. ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಸೆಂಡ್ ಆಗುತ್ತಿಲ್ಲ. ಈ ಬಗ್ಗೆ ಅನೇಕರು ಟ್ವಿಟರ್​ನಲ್ಲಿ ದೂರುತ್ತಿದ್ದಾರೆ.