ಮೊದಲ ಬಾರಿಗೆ ತನ್ನ ವಾಣಿಜ್ಯ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದ ಇಸ್ರೋ.!

ಆಂಧ್ರಪ್ರದೇಶ: ಇಸ್ರೋದ ಎಲ್‌ವಿಎಂ3-ಎಂ2 ವಾಹಕ ಇದೇ ಮೊದಲ ಬಾರಿಗೆ ತನ್ನ ವಾಣಿಜ್ಯ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.

36 ಬ್ರಾಡ್‌ಬ್ಯಾಂಡ್‌ ಉಪಗ್ರಹಗಳನ್ನು ಹೊತ್ತ ಎಲ್‌ವಿಎಂ3-ಎಂ2 ರಾಕೆಟ್‌ ಶ್ರೀಹರಿಕೋಟಾದ ಸತೀಶ್‌ ಧವನ್‌ ಕೇಂದ್ರದಲ್ಲಿರುವ 2 ನೇ ಲಾಂಚ್‌ ಪ್ಯಾಡ್‌ನಿಂದ ಶನಿವಾರ ಮಧ್ಯರಾತ್ರಿ 12.07 ಕ್ಕೆ ಆಗಸದತ್ತ ಹಾರಿದ ರಾಕೆಟ್‌ ತನ್ನ ಕಕ್ಷೆಗೆ ಯಶಸ್ವಿಯಾಗಿ ಉಪಗ್ರಹಗಳನ್ನು ಕೂರಿಸಿದೆ.

ಒಟ್ಟು 5,796 ಕೆಜಿಯ 36 ಉಪಗ್ರಹಗಳನ್ನು ಹೊತ್ತ ಈ ರಾಕೆಟ್‌ ಯಶಸ್ವಿಯಾಗಿ ಕಕ್ಷೆಗೆ ರವಾನಿಸಿದೆ. ಈ ಯೋಜನೆಗೆ ಸಹಕಾರ ನೀಡಿದ್ದಕ್ಕಾಗಿ ಇಸ್ರೋ, ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದೆ.

ಈ ಯಶಸ್ವಿ ಉಡಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌, ನಾವು ಈಗಾಗಲೇ ದೀಪಾವಳಿ ಆಚರಣೆಯನ್ನು ಪ್ರಾರಂಭಿಸಿದ್ದೇವೆ. ಈಗ ರಾಕೆಟ್ ಅದರ ಉದ್ದೇಶಿತ ಹಾದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.