ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಬುಧವಾರದ ವಹಿವಾಟು ಮುಕ್ತಾಯದ ವೇಳೆಗೆ ರೂಪಾಯಿ ಮೌಲ್ಯ 82.95 ಕ್ಕೆ ಇಳಿಕೆಯಾಗಿದೆ.
ಕಳೆದ ಕೆಲ ದಿನಗಳಲ್ಲಿ ತುಸು ಗಳಿಕೆ ಕಂಡುಬಂದಿದ್ದರೂ ಇಂದಿನ ಕೊನೆ ಸೆಷನ್ ನಲ್ಲಿ ಮೌಲ್ಯ ತೀವ್ರ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಹಣದುಬ್ಬರ ಏರಿಕೆ, ಕೇಂದ್ರೀಯ ಬ್ಯಾಂಕ್ಗಳಿಂದ ರೆಪೊ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಬುಧವಾರ ಪ್ರಾರಂಭದಲ್ಲಿ 82.3062 ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ ಹಿಂದೆಂದಿಗಿಂತಲೂ ಹೆಚ್ಚಿನ ಕುಸಿತ ದಾಖಲಿಸಿದೆ.