ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ರೆಪೋ ದರವನ್ನು ಶೇ.0.5 ರಷ್ಟು ಹೆಚ್ಚಿಸಿದೆ. ಇದರಿಂದ ಪ್ರಸ್ತುತ ರೆಪೋ ದರ ಶೇ. 5.90 ಗೆ ಏರಿಕೆಯಾಗಿದೆ. ವಾಣಿಜ್ಯ ಬ್ಯಾಂಕ್ಗಳಿಗೆ ನೀಡುವ ಸಾಲದ ಬಡ್ಡಿ ದರವೇ ರೆಪೋ ದರವಾಗಿದೆ.
ರೆಪೋ ದರ ಹೆಚ್ಚಳದಿಂದ ವಾಣಿಜ್ಯ ಬ್ಯಾಂಕ್ಗಳಿಗೆ ಸಿಗುವ ಸಾಲದ ಬಡ್ಡಿ ದರ ಏರಿಕೆಯಾಗಿದೆ. ಇದರಿಂದ ವಾಣಿಜ್ಯ ಬ್ಯಾಂಕ್ಗಳು ಗ್ರಾಹಕರಿಗೆ ನೀಡುವ ಸಾಲದ ಬಡ್ಡಿಯೂ ಸಹಜವಾಗಿಯೇ ಏರಿಕೆ ಮಾಡುತ್ತವೆ. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಏರಿಕೆಯಾಗಲಿದೆ.
ದೇಶದಲ್ಲಿ ತಲೆದೋರಿದ ಹಣದುಬ್ಬರ ಏರಿಕೆಯನ್ನು ನಿಯಂತ್ರಣಕ್ಕೆ ತರಲು ರೆಪೋ ದರ ಏರಿಕೆ ಮಾಡಲಾಗಿದೆ. ಇತ್ತೀಚಿಗೆ ಅಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆಯಲ್ಲಿ ಇಳಿಕೆ ಆಗಿದ್ದು, ಇದರ ಬೆಲೆ ಇನ್ನೂ ಇಳಿಕೆಯಾದರೆ ಹಣದುಬ್ಬರಕ್ಕೆ ರಿಲೀಫ್ ಸಿಗಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.