ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಗರಿಷ್ಠ ಪ್ರಮಾಣದಲ್ಲಿದಾಗಲೇ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದಾಖಲೆಯ ಕುಸಿತವಾಗುತ್ತಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಪರಿಷ್ಕೃತ ಹಣದುಬ್ಬರದ ಒತ್ತಡಕ್ಕೆ ಕಾರಣವಾಗುವ ಉದಯೋನ್ಮುಖ ಮಾರುಕಟ್ಟೆಗಳಿಂದ ನಿರಂತರ ಎಫ್‌ಐಐ ಮಾರಾಟದ ಮಧ್ಯೆ ರೂಪಾಯಿಯ ಬೆಲೆ ಏರಿಳಿತ ಆಗುತ್ತಲೇ ಇದೆ.
ಭಾರತೀಯ ರೂಪಾಯಿ ಹೊಸ ಸಾರ್ವಕಾಲಿಕ 81 ರೂ. ಪ್ರತಿ ಯುಎಸ್ ಡಾಲರ್‌ಗೆ ಕುಸಿದಿರುವುದು ಸ್ಟಾರ್ಟ್‌ಅಪ್‌ಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸೆ. 26 ರಂದು ರೂಪಾಯಿಯು ಯುಎಸ್ ಡಾಲರ್ ವಿರುದ್ಧ 81.66 ನಲ್ಲಿ ವಹಿವಾಟು ನಡೆಸಿದ್ದು, ಇದು ಜೀವಮಾನದ ಕನಿಷ್ಠ ಮಟ್ಟವಾಗಿದೆ.
ಇಂದು ಕೂಡ ಅಮೆರಿಕದ ಡಾಲರ್ ಎದುರು ಭಾರತದ ಕರೆನ್ಸಿ 40 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 81.93 ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ 2022 ರ ಕ್ಯಾಲೆಂಡರ್ ವರ್ಷದಲ್ಲಿ ಇಲ್ಲಿಯವರೆಗೆ ಡಾಲರ್ ವಿರುದ್ಧ ದೇಶೀಯ ಕರೆನ್ಸಿ ಸುಮಾರು 9 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಇದರಿಂದ ಆಮದುಗಳನ್ನು ಅವಲಂಬಿಸಿರುವ ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗಬಹುದು.