ಸೆ. 29 ರಿಂದ ಮೈಸೂರು ದಸರಾ ವೀಕ್ಷಣೆಗೆ ಆನ್​ಲೈನ್​ ಗೋಲ್ಡ್ ಕಾರ್ಡ್ ವಿತರಣೆ.!

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ವೀಕ್ಷಿಸಲು ಬರುವ ಪ್ರವಾಸಿಗಳಿಗೆ ಅನುಕೂಲವಾಗಲು ಸರ್ಕಾರ ಗೋಲ್ಡ್ ಕಾರ್ಡ್​ ನೀಡಲು ಮುಂದಾಗಿದೆ.

ಗೋಲ್ಡ್​ ಕಾರ್ಡ್​ನ್ನು ಆನ್​ಲೈನ್​ ಮೂಲಕ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದ್ದು, ಪ್ರತಿ ಗೋಲ್ಡ್​ ಕಾರ್ಡ್​​ಗೆ 4,999 ರೂಪಾಯಿ.​ www.mysoredasara.gov.in ವೈಬ್​ಸೈಟ್​ನಲ್ಲಿ ಗೋಲ್ಡ್​​ ಕಾರ್ಡ್ ಖರೀದಿಸಬಹುದಾಗಿದೆ. ಒಮ್ಮೆ ಒಬ್ಬರು ಗರಿಷ್ಠ 2 ಗೋಲ್ಡ್ ಕಾರ್ಡ್ ಖರೀದಿಸಲು ಅವಕಾಶವಿದ್ದು, ಆನ್​ಲೈನ್ ಪಾವತಿ ದೃಢೀಕರಿಸಿದ ನಂತರ ಗೋಲ್ಡ್ ಕಾರ್ಡ್​ ನೀಡಲಾಗುತ್ತದೆ. 29-09-2022ರಿಂದ ಪ್ರವಾಸೋದ್ಯಮ ಇಲಾಖೆಯ ಮಯೂರ ಹೋಟೆಲ್ ಹತ್ತಿರ ಗೋಲ್ಡ್​​ ಕಾರ್ಡ್​ನ್ನು ​ವಿತರಿಸಲಾಗುತ್ತದೆ. ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಗೋಲ್ಡ್​​ ಕಾರ್ಡ್​​ ಪಡೆದವರಿಗೆ ದಸರಾ ಮೆರವಣಿಗೆಯ ಜಂಬೂಸವಾರಿ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು, ಒಮ್ಮೆ ಪ್ರವಾಸಿ ತಾಣಗಳ ವೀಕ್ಷಣೆ, ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನಾ ಚರ್ಚ್​, ರೈಲ್ವೆ ಮ್ಯೂಸಿಯಮ್ ಹಾಗೂ ಕೆಆರ್​ಎಸ್​ ಜಲಾಶಯದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.