ಸಚಿವರ ಕಾರ್ಯಕ್ರಮದ ಭದ್ರತೆಗೆ ಹೊರಟಿದ್ದ ಡಿ.ಆರ್ ವಾಹನ ಪಲ್ಟಿ

ಶಿರಸಿ: ಸಚಿವರ ಕಾರ್ಯಕ್ರಮದ ಭದ್ರತೆಗೆ ಹೊರಟಿದ್ದ ಡಿ.ಆರ್. ವ್ಯಾನ್ ಪಲ್ಟಿಯಾಗಿ ಮೂವರಿಗೆ ಗಾಯಗಳಾದ ಘಟನೆ ಶಿರಸಿಯ ತಾರಗೋಡು ಸಮೀಪ ನಡೆದಿದೆ.

ಎಂಟು ಜನ ಡಿ.ಆರ್ ಪೊಲೀಸರಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮೂವರಿಗೆ ಗಾಯಗಳಾಗಿದ್ದು ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.