ಕಾರವಾರ: ಪಿಎಫ್‌ಐ ಸಂಘಟನೆ ನಿಷೇಧ ವಿಚಾರವಾಗಿ ಕಾರವಾರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಹಿತದೃಷ್ಟಿಯ ಪ್ರಶ್ನೆ ಬಂದಾಗ ಪಿಎಫ್ಐ ಮಾತ್ರ ನಿಷೇಧವಲ್ಲ. ದೇಶವಿರೋಧಿ ಕೆಲಸ ಮಾಡುವ ಎಲ್ಲ ಸಂಘಟನೆಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯಾವೆಲ್ಲ ಸಂಘಟನೆಗಳು ದೇಶವಿರೋಧಿ ಕೆಲಸಗಳಿಗೆ ಕೈಹಾಕುತ್ತವೆಯೋ ಅಂತಹ ಸಂಘಟನೆಗಳನ್ನು ಯಾವುದೇ ಜಾತಿ, ಧರ್ಮ ನೋಡದೇ ನಿಷೇಧ ಮಾಡುತ್ತೇವೆ. ಸರ್ಕಾರ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯಗಳನ್ನ ಕೈಗೊಳ್ಳುತ್ತದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.