ರಾಜ್ಯದಲ್ಲಿ ಶೀಘ್ರವೇ ಜಾರಿಗೆ ಬರಲಿದೆ ಪ್ರೀಪೇಯ್ಡ್ ವಿದ್ಯುತ್.! ಇನ್ಮುಂದೆ ಮೊದಲೇ ಪಾವತಿಸಬೇಕು ಕರೆಂಟ್ ಬಿಲ್.!

ಬೆಂಗಳೂರು: ರಾಜ್ಯದಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ಸಿದ್ದತೆ ನಡೆಸಿದ್ದು, ಶೀಘ್ರವೇ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಚಾಲನೆ ನೀಡಲಿದೆ. ರಾಜ್ಯದ ಎಲ್ಲಾ ಎಸ್ಕಾಂ ವ್ಯಾಪ್ತಿಯ್ಲೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ನಿರ್ದೇಶನ ನೀಡಿದೆ.

ಈ ಕುರಿತು ರಾಜ್ಯಕ್ಕೆ 2021 ರ ಜುಲೈ 22 ರಂದು ಪತ್ರ ಬರೆದಿದ್ದ ಕೇಂದ್ರ ಇಂಧನ ಸಚಿವಾಲಯ 2023 ರ ಡಿಸೆಂಬರ್ ನೊಳಗೆ ಪ್ರಿಪೇಯ್ಡ್ ಮೀಟರ್ ಅಳವಡಿಸಬೇಕು ಎಂದು ಸೂಚನೆ ನೀಡಿದೆ. ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಿದರೆ ಗ್ರಾಹಕರು ಪ್ರತಿ ಸಂಪರ್ಕಕ್ಕೂ ಮೊದಲೇ ನಿರ್ದಿಷ್ಟ ಹಣ ಪಾವತಿಸದರಷ್ಟೇ ವಿದ್ಯುತ್ ಸರಬರಾಜಾಗಲಿದೆ. ಪ್ರತಿ ತಿಂಗಳೂ ಈ ರೀತಿ ಮೊದಲೇ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ.