‘ಹಲಾಲ್ ಮುಕ್ತ ದೀಪಾವಳಿ’ ಆಚರಣೆಗೆ ಹಿಂದೂ ಸಂಘಟನೆಗಳಿಂದ ಕರೆ

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಶುರುವಾಗಿದ್ದು ‘ಹಲಾಲ್ ಮುಕ್ತ ದೀಪಾವಳಿ’ ಎಂಬ ಅಭಿಯಾನಕ್ಕೆ ಹಿಂದೂ ಸಂಘಟನೆಗಳು ಕರೆ ನೀಡಿವೆ. ಹಲಾಲ್ ಉತ್ಪಾದನೆಗಳ ಕಡ್ಡಾಯಗೊಳಿಸುವಿಕೆ ವಿರುದ್ಧ ಆಂದೋಲನಕ್ಕೆ ಸಂಘಟನೆಗಳು ಮುಂದಾಗಿವೆ.

ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗೊಷ್ಠಿ ನಡೆಸಿ ಹಲಾಲ್ ದೇಶದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಹಲಾಲ್ ಮುಕ್ತ ದೀಪಾವಳಿವನ್ನು ಈ‌ ಬಾರಿ‌ ಹಿಂದೂ ಸಮಾಜ ಆಚರಿಸಬೇಕು. ಕಬ್ಬು, ಹೂ, ಹಣ್ಣು, ಪೂಜಾ ಸಾಮಗ್ರಿಗಳನ್ನು ಕೇವಲ ಹಿಂದೂ ವ್ಯಾಪಾರಿಗಳಿಂದ ಖರೀದಿ ಮಾಡಬೇಕು ಎಂದು ಕರೆ ನೀಡಿದರು.

ಮುಸ್ಲಿಂ ವ್ಯಾಪಾರಿಗಳಿಂದ ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿಸಿದ್ರೆ ಅಶಾಸ್ತ್ರವಾಗುತ್ತದೆ. ಇದು ನಮ್ಮ ಧರ್ಮಕ್ಕೆ ಅಪಮಾನ ಮಾಡಿದಂತೆ. ದೇಶದ ವಿಧ್ವಂಸಕ ಕೃತ್ಯಗಳಿಗೆ ಈ ಹಲಾಲ್ ಹಣವನ್ನು ಬಳಸಲಾಗುತ್ತಿದೆ. ದೇಶದ್ರೋಹಿ PFI, SDPI ಗೆ ಮೂಲ ಆದಾಯ ಈ ಹಲಾಲ್ ಆಗಿದೆ. ಹಳೆ ಹುಬ್ಬಳ್ಳಿ ಗಲಭೆ, ಕೆಜೆಹಳ್ಳಿ ಮತ್ತು ಡಿಜೆಹಳ್ಳಿ CAA ಪ್ರತಿಭಟನೆಗೆ ಹಲಾಲ್ ನಿಂದ ಹಣ ವರ್ಗಾವಣೆಯಾಗುತ್ತದೆ. ಹಲಾಲ್ ಸರ್ಟಿಫಿಕೇಟ್ ಸಾಮಗ್ರಿಗಳನ್ನು ಖರೀದಿ ಮಾಡುವುದರಿಂದ ರಾಕ್ಷಸರು ಹುಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.