ಭಟ್ಕಳ: ತಾಲೂಕಿನ ಕೋಣಾರ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟೂ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ 5 ವಿವಿಧ ರಸ್ತೆ ನಿರ್ಮಾಣದ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕಾನಮೂರ್ತಿ ದೇವಸ್ಥಾನದಿಂದ ಮಂಜುನಾಥ ಮನೆಯವರೆಗೆ, 5 ಲಕ್ಷ, ಕೋಣಾರ ಮುಖ್ಯರಸ್ತೆಯಿಂದ ಕಟ್ನಮಕ್ಕಿ ಬುದುವಂತರ ಮನೆಯವರೆಗೆ ರಸ್ತೆ ನಿರ್ಮಾಣಕ್ಕೆ 10 ಲಕ್ಷ, ಸಾಗರ ಮುಖ್ಯ ರಸ್ತೆಯಿಂದ ಪಂಚಾಯತ್ ಹೋಗುವ ರಸ್ತೆ ಮುಂದುವರಿದ ಕಾಮಗಾರಿ 25 ಲಕ್ಷ, ಸಬಾತಿ ಹಡೀಲ ಸಿಸಿ ರಸ್ತೆಯಿಂದ ಸಾಗರ ಮುಖ್ಯ ರಸ್ತೆಯವರೆಗೆ ರಸ್ತೆ ನಿರ್ಮಾಣಕ್ಕೆ 35 ಲಕ್ಷ, ಕೋಣಾರ ಮುಖ್ಯರಸ್ತೆಯಿಂದ ಅನಂತ ಹೆಬ್ಬಾರ್ ಮನೆಯವರೆಗೆ ರಸ್ತೆಗೆ 05 ಲಕ್ಷ ಒಟ್ಟು 80 ಲಕ್ಷ ರೂ ವೆಚ್ಚದ 5 ವಿವಿಧ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು