ರಷ್ಯಾ: ನ್ಯಾಟೋ ಪಡೆಗಳು ರಷ್ಯಾ ಸೇನೆ ಜೊತೆ ನೇರವಾಗಿ ಕದನ ಅಥವಾ ಘರ್ಷಣೆಗೆ ಇಳಿದರೆ ಜಾಗತಿಕ ದುರಂತ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಕಜಕಿಸ್ತಾನದ ರಾಜಧಾನಿ ಆಸ್ತಾನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ರಷ್ಯಾ ಸೇನೆಯ ಜೊತೆ ನ್ಯಾಟೋ ಪಡೆಗಳ ಯಾವುದೇ ನೇರ ಸಂಪರ್ಕ ಅಥವಾ ನೇರ ಘರ್ಷಣೆಯು ತುಂಬಾ ಅಪಾಯಕಾರಿ. ಇದರಿಂದ ಜಾಗತಿಕ ದುರಂತ ಸಂಭವಿಸಬುದು. ಹೀಗಾಗಿ ಇಂತಹ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪುಟಿನ್ ಹೇಳಿದರು.