ಬೆಂಗಳೂರು: ಸಾಮಾಜಿಕ ಜಾಲತಾಣಗಳು ಎಷ್ಟು ಉಪಯೋಗವೋ ಒಂದುಕ್ಷಣ ಮೈಮರೆತರೆ ಅಷ್ಟೇ ಹಾನಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು.! ರಾಜಧಾನಿ ಬೆಂಗಳೂರಿನಲ್ಲಿ ವೃದ್ಧರನ್ನೇ ಟಾರ್ಗೆಟ್ ಮಾಡಿ ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಹಣ ಬಾಚಿಕೊಳ್ಳುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ರೀತುಶ್ರೀ ಅಲಿಯಾಸ್ ಸುಶ್ಮಿತಾ ರಾಜ್ ಹಾಗೂ ಸಂತೋಷ್ ಬಂಧಿತ ಆರೋಪಿಗಳು.
ಈ ಇಬ್ಬರೂ ಖದೀಮರು ಸೇರಿಕೊಂಡು ನಕಲಿ ಫೇಸ್ ಬುಕ್ ಖಾತೆ ತೆರೆದು ಬೇರೆ ಬೇರೆ ಫೋಟೋಗಳನ್ನು ಹಾಕಿ ವೃದ್ಧವರನ್ನ ಟಾರ್ಗೆಟ್ ಮಾಡುತ್ತಿದ್ದರು. ಹೀಗೆ ಆಕೆ ನನ್ನ ಗಂಡ ವಿದೇಶದಲ್ಲಿದ್ದಾನೆ. ನನ್ನನ್ನು ಬಿಟ್ಟು ಎರಡು ವರ್ಷವಾಗಿದೆ. ಕೆಲಸವೂ ಇಲ್ಲ . ನನಗೆ ಚಿಕ್ಕ ಮಗುವಿದೆ. ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿದೆ. ನಾನು ವಿಚ್ಛೇಧನಕ್ಕಾಗಿ ಅರ್ಜಿ ಹಾಕಿದ್ದು, ಸದ್ಯದಲ್ಲೇ ನನಗೆ ಹಣ ಸಿಗುತ್ತದೆ. ಅವಾಗ ಹಣ ವಾಪಸ್ ಕೊಡುತ್ತೇನೆ ಸ್ವಲ್ಪ ಹಣ ಕೊಡಿ ಎಂದು ಕೇಳುತ್ತಿದ್ದಳು.
ಇದೇ ರೀತಿ ಯಾಮಾರಿಸಿ ಚೌಡಪ್ಪ ಎಂಬುವರಿಂದ ಹಣ ದೋಚಿ ಪರಾರಿಯಾಗಿದ್ದಳು. ಈ ಬಗ್ಗೆ ಚೌಡಪ್ಪ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿದು ಆರೋಪಿಗಳ ಜಾಡು ಹಿಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.