ನೇಪಾಳದ ಭೀಕರ ರಸ್ತೆ ಅಪಘಾತ: 16 ಮಂದಿ ಸಾವು, 24 ಜನರ ಸ್ಥಿತಿ ಚಿಂತಾಜನಕ

ನೇಪಾಳ: ಬಾರಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಜನಕವಾಗಿದೆ. ಕಠ್ಮಂಡುವಿನಲ್ಲಿ ಅ. 3 ರಂದು ಇದೇ ರೀತಿಯ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 36 ಜನರು ಬಸ್ ಅಪಘಾತದಲ್ಲಿ ಗಾಯಗೊಂಡಿದ್ದರು.